ಮಂಗಳೂರು: ಮನೆಮೇಲೆ ಬೃಹತ್ ಮರಬಿದ್ದು ಮನೆಗೆ ಸಂಪೂರ್ಣ ಹಾನಿ ➤ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 10. ಇಲ್ಲಿನ ಬಿ.ಜಿ.ಎಸ್ ಶಾಲಾ ಹಿಂಭಾಗದ ಮನೆಯೊಂದರ ಮೇಲೆ ಇಂದು ಬೆಳ್ಳಂಬೆಳಗ್ಗೆ ಬೃಹತ್‌ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಮೂವರಿಗೆ ಗಾಯಗಳಾದ ಘಟನೆ ಕಾವೂರಿನಿಂದ ವರದಿಯಾಗಿದೆ.


ಭಾರೀ ಮಳೆಯಿಂದಾಗಿ ಬೃಹತ್‌ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು, ಪರಿಣಾಮ ಮನೆಯ ಮೇಲ್ಛಾವಣಿ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮನೆಯ ಒಳಗೆ ಒಟ್ಟು 5 ಮಂದಿ ಮಲಗಿದ್ದು, ಅವರ ಪೈಕಿ ಮೂವರು ಹಂಚು ಮತ್ತು ಮರದ ಅವಶೇಷಗಳು ಬಿದ್ದು ಗಾಯಗೊಂಡಿದ್ದಾರೆ. ಬಳಿಕ ಸ್ಥಳೀಯರು ಬಂದು ರಕ್ಷಣಾ ಕಾರ್ಯ ನಡೆಸಿದರು. ಮನೆಯ ಛಾವಣಿಗೆ ತಾತ್ಕಾಲಿಕವಾಗಿ ಟರ್ಪಾಲು ಹಾಕಿ ಗೋಡೆಗಳಿಗೆ ಹಾನಿಯಾಗುವುದನ್ನು ತಡೆಯಲಾಗಿದೆ.

Also Read  ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ

error: Content is protected !!
Scroll to Top