ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಂಗಳೂರು: ಹೂಡಿಕೆಯ ಮೇಲೆ ಅಧಿಕ ಲಾಭಾಂಶದ ಆಮಿಷ ➤ 1.64 ಲಕ್ಷ ರೂ. ವಂಚನೆ – News Kadaba

ಮಂಗಳೂರು: ಹೂಡಿಕೆಯ ಮೇಲೆ ಅಧಿಕ ಲಾಭಾಂಶದ ಆಮಿಷ ➤ 1.64 ಲಕ್ಷ ರೂ. ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 08. ಹೂಡಿಕೆಯ ಮೇಲೆ ಅಧಿಕ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ 1.64 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಪರಿಚಿತನೋರ್ವ ವ್ಯಕ್ತಿಯೋರ್ವರಿಗೆ ಜೂ. 04ರಂದು ಇನ್ಸ್ಟಾಗ್ರಾಂ ಮೂಲಕ, “ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ಸಂದೇಶ ಮತ್ತು ಲಿಂಕ್ ಕಳುಹಿಸಿದ್ದ ಎನ್ನಲಾಗಿದೆ. ಆ ಲಿಂಕ್ ಕ್ಲಿಕ್ ಮಾಡಿದಾಗ ಇನ್‌ಸ್ಟಾಗ್ರಾಂ ಖಾತೆಯ ಪೇಜ್ ತೆರೆದುಕೊಂಡಿತ್ತು. ಆ ಬಳಿಕ ಅಪರಿಚಿತ ವ್ಯಕ್ತಿ 50,000 ರೂ. ಹೂಡಿಕೆ ಮಾಡಿದರೆ 4,90,000 ರೂ. ಲಾಭಾಂಶ ಬರುವುದಾಗಿ ಹೇಳಿದ್ದ. ಅದರಂತೆ ದೂರುದಾರರು 50,000 ರೂ. ಹಣ ವರ್ಗಾಯಿಸಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ 6,90,000 ರೂ. ಲಾಭಾಂಶ ಬಿಟ್‌ ಕಾಯಿನ್ ರೂಪದಲ್ಲಿ ಬಂದಿರುವುದಾಗಿ ತಿಳಿಸಿ, ಬಗ್ಗೆ ಸ್ಕ್ರೀನ್ ಶಾಟ್ ಕೂಡ ಕಳುಹಿಸಿದಲ್ಲದೇ ಇದನ್ನು ಖಾತೆಗೆ ಜಮೆ ಮಾಡಬೇಕಾದರೆ 64,000 ರೂ. ವರ್ಗಾಯಿಸುವಂತೆ ಹೇಳಿದ್ದ ಎನ್ನಲಾಗಿದೆ. ಇದನ್ನು ನಂಬಿದ ದೂರುದಾರರು ಹಣ ವರ್ಗಾಯಿಸಿದ್ದರು. ಮತ್ತೆ ಕಮಿಷನ್ ಮೊತ್ತವಾಗಿ ಹಣ ನೀಡುವಂತೆ ಅಪರಿಚಿತ ವ್ಯಕ್ತಿ ಹೇಳಿದ್ದು ಅದನ್ನು ಕೂಡ ದೂರುದಾರರು ವರ್ಗಾಯಿಸಿದ್ದರು. ಅನಂತರ ಲಾಭಾಂಶದ ಎಲ್ಲ ಹಣವನ್ನು ಖಾತೆಗೆ ಜಮೆ ಮಾಡಬೇಕಾದರೆ ಇನ್‌ಸ್ಟಾ ಗ್ರಾಂ ಖಾತೆಯನ್ನು ಖಾತರಿಗೊಳಿಸಬೇಕಾಗಿದೆ. ಇನ್‌ಸ್ಟಾಗ್ರಾಂ ಖಾತೆಯ ಪ್ರೊಫೈಲ್ ಎಡಿಟ್ ಮಾಡಿ ತಾನು ನೀಡಿದ ಇ-ಮೇಲ್ ಐಡಿ ಹಾಕುವಂತೆ ಹೇಳಿದ. ದೂರುದಾರರು ಅದರಂತೆ ಮಾಡಿದಾಗ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಆ ಇನ್‌ಸ್ಟಾ ಗ್ರಾಂ ಖಾತೆಯನ್ನು ಬಳಸಿ ಅಪರಿಚಿತ ವ್ಯಕ್ತಿಯು ದೂರುದಾರರ ಸ್ನೇಹಿತರಿಗೆ ಹಣ ಹೂಡಿಕೆ ಮಾಡುವಂತೆ ಸಂದೇಶಗಳನ್ನು ಕಳುಹಿಸಿದ್ದಾನೆ. ಅಪರಿಚಿತ ವ್ಯಕ್ತಿ ಒಟ್ಟು 1.64 ಲ.ರೂ. ವಂಚಿಸಿದ್ದಾನೆ ಎಂದು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top