ಬಸ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ ➤ ಯುವತಿ ಮೃತ್ಯು, ಯುವಕ ಗಂಭೀರ

(ನ್ಯೂಸ್ ಕಡಬ) newskadaba.com ಹಾವೇರಿ, ಜೂ. 07. ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಸ್ಲೀಪರ್ ಕೋಚ್ ಬಸ್‌‌ನಲ್ಲಿ ವಿಷ ಸೇವಿಸಿದ್ದು, ಈ ಪೈಕಿ ಯುವತಿ ಮೃತಪಟ್ಟು, ಯುವಕ ಅಸ್ವಸ್ಥಗೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಬೆಂಗಳೂರು ಮೂಲದ ವಿದ್ಯಾರ್ಥಿನಿ ಹೇಮಾ ಹಾಗೂ ಬಾಗಲಕೋಟೆ ಮೂಲದ ಅಖಿಲ್ ಎಂದು ಗುರುತಿಸಲಾಗಿದೆ. ಮುಂಬೈಗೆ ತೆರಳುತ್ತಿದ್ದ ಸ್ಲೀಪರ್ ಕೋಚ್ ಬಸ್ ನಲ್ಲಿ ಈ ಘಟನೆ ನಡೆದಿದ್ದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಟೋಲ್ ಬಳಿ ಬಸ್ ನಿಲ್ಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದ ಹೇಮಾ ಹಾಗೂ ಬಾಗಲಕೋಟೆ ಮೂಲದ ಅಖಿಲ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದರು ಎಂದು ಹೇಳಲಾಗಿದೆ. ಊಟಕ್ಕೆಂದು ಮಾರ್ಗಮಧ್ಯೆ ಹೋಟೆಲ್ ಬಳಿ ಬಸ್ ನಿಲ್ಲಿಸಿದಾಗ ವಿಷದ ವಾಸನೆ ಬರುವುದನ್ನು ಗಮನಿಸಿದ ಪ್ರಯಾಣಿಕರು ಪರಿಶೀಲನೆ ನಡೆಸಿದಾಗ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಕೂಡಲೇ ಬಸ್ಸಿನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ಯುವತಿ ಅದಾಗಲೇ ಮೃತಪಟ್ಟಿದ್ದಾಳೆ. ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ.

Also Read  ದೆಹಲಿ ನಾಯಿ ಮೇಲೆ ಅತ್ಯಾಚಾರ ➤ ಪಾಪಿ ವ್ಯಕ್ತಿಯ ಬಂಧನ!

error: Content is protected !!
Scroll to Top