ಭೀಕರ ಅಪಘಾತ ➤ ಖ್ಯಾತ ಮಲಯಾಳಂ ನಟ ಕೊಲ್ಲಂ ಸುಧಿ ಮೃತ್ಯು

(ನ್ಯೂಸ್ ಕಡಬ) newskadaba.com ಕೇರಳ, ಜೂ. 05. ಭೀಕರ ಕಾರು ಅಪಘಾತದಲ್ಲಿ ಹಾಸ್ಯ ಪಾತ್ರಗಳಿಗೆ ಹೆಸರಾಗಿದ್ದ ಮಲಯಾಳಂ ನಟ ಕೊಲ್ಲಂ ಸುಧಿ ಅವರು ಮೃತಪಟ್ಟ ಘಟನೆ ವರದಿಯಾಗಿದೆ.

 


ಸುಧಿ ಅವರು ಸಹ ಕಲಾವಿದರಾದ ಮಹೇಶ್, ಬಿನು ಅಡಿಮಾಲಿ ಮತ್ತು ಉಲ್ಲಾಸ್ ಅರೂರ್ ಎಂಬವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಕಾರು ತ್ರಿಶೂರ್ ಕಯ್ಪಮಂಗಲಂ ಪಣಾಂಬಿಕುನ್‌ ಎಂಬಲ್ಲಿ ಮುಂಜಾನೆ 4:30 ಕ್ಕೆ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ. ತಕ್ಷಣವೇ ಗಾಯಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಸುಧಿ ಅವರು ಅದಾಗಲೇ ಮೃತಪಟ್ಟಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

Also Read  ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣ: ಆರೋಪಿ ಸೆರೆ

error: Content is protected !!
Scroll to Top