ಪ್ರೇಮ ಕೂಪಕ್ಕೆ ಸಿಕ್ಕಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ.!➤ಗರ್ಭಿಣಿ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಲಕ್ನೋ,ಮೇ.29 ಪ್ರೇಮ ಕೂಪಕ್ಕೆ ಸಿಕ್ಕಿಬಿದ್ದು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಗರ್ಭಿಣಿ ಮಹಿಳೆಯ ಸಾವಿಗೆ ಕಾರಣರಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಲಖಿಂಪುರ ಖೇರಿ ನಿವಾಸಿ ಸೀಮಾ ಗೌತಮ್ (24) ಮೃತ ಮಹಿಳೆ.

ಈಕೆ ಲಖಿಂಪುರ ಖೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಆರೋಪಿಗಳಾದ ನಾವೇದ್ ಮತ್ತು ಫರ್ಹಾನ್ ಕರೆತಂದಿದ್ದರು. ಆಕೆ ಮೃತಪಟ್ಟಿರುವ ಸುದ್ದಿ ತಿಳಿದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸೀಮಾಗೆ ವಿಷಪ್ರಾಶನ ಮಾಡಲಾಗಿದೆ ಎಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಉತ್ತರದಲ್ಲಿ ಭಾರತದಲ್ಲಿ ದಟ್ಟ ಮಂಜು: ದುರಂತಗಳಲ್ಲಿ 11 ಮಂದಿ ಮೃತ್ಯು…!

 

 

 

error: Content is protected !!
Scroll to Top