ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ► ದೀಪಕ್ ಮನೆಯವರಿಗೆ ಧನ ಸಹಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.18. ಇತ್ತೀಚೆಗೆ ಹಾಡುಹಗಲೇ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್ ರಾವ್ ಮನೆಗೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ದೀಪಕ್ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಗುರುವಾರದಂದು ದೀಪಕ್ ಮನೆಗೆ ಭೇಟಿ ನೀಡಿದ ಸಚಿವರು ವೈಯಕ್ತಿಕವಾಗಿ ಧನಸಹಾಯ ನೀಡಿ ದೀಪಕ್ ರಾವ್ ತಮ್ಮ ಸತೀಶ್ ಗೆ ಕುದುರೆಮುಖದ ಕಂಪೆನಿಯಲ್ಲಿ ಕೆಲಸ ಒದಗಿಸುವ ಭರವಸೆಯಿತ್ತರು. ಗುರುವಾರ ಬೆಳಿಗ್ಗೆ ಗುರುಪುರ ವಜ್ರದೇವಿ ಮಠಕ್ಕೆ ತೆರಳಿ ರಾಜಶೇಖರಾನಂದ ಸ್ವಾಮೀಜಿಯನ್ನು ಭೇಟಿ ಮಾಡಿದ ನಂತರ ಮಧ್ಯಾಹ್ನ ವೇಳೆ ದೀಪಕ್ ರಾವ್ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅನಂತ ಕುಮಾರ್ ಹೆಗಡೆಯವರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

Also Read  ಮ0ಗಳೂರು: ಸ್ವಚ್ಛ ಗೆಳತಿ ಜಾಗೃತಿ ಅಭಿಯಾನ ತರಬೇತಿ

error: Content is protected !!