ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ.!➤ ಹೈಕೋರ್ಟ್

(ನ್ಯೂಸ್ ಕಡಬ)newskadaba.com ತುಮಕೂರು,ಮೇ.22 ರಾಜ್ಯ ಸರ್ಕಾರಕ್ಕೆ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾ.ಕೃಷ್ಣ ದೀಕ್ಷೀತ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದ್ದು, ಮುರುಘಾಮಠಕ್ಕೆ ವೀರಶೈವ ಮುಖಂಡರು, ಸಮಾಜದ ಪ್ರಮುಖರು ಆಡಳಿತ ನಡೆಸಬಹುದು.

ಆಡಳಿತಾಧಿಕಾರಿಗೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ.ಈ ಸಂಬಂಧ ಡಾ. ಶಿವಮೂರ್ತಿ ಮುರುಘಾಶ್ರೀ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ, ಸರ್ಕಾರಕ್ಕೆ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಅಧಿಕಾರ ಇಲ್ಲ ಎಂದು ಹೇಳಿದೆ.

Also Read  ಮೊದಲ ಬಾರಿಗೆ ದತ್ತಪೀಠದಲ್ಲಿ ಮುಡಿ ಕಾರ್ಯಕ್ರಮ ನರವೇರಿಸಿದ ಗಂಗಾಧರ್ ಕುಲಕರ್ಣಿ..!

 

error: Content is protected !!
Scroll to Top