ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಮೃತ್ಯು..!

(ನ್ಯೂಸ್ ಕಡಬ) newskadaba.com ಕೇರಳ,ಮೇ.15 ಕರ್ತವ್ಯದಲ್ಲಿದ್ದ ವೇಳೆ ಕಟ್ಟಡದಿಂದ ಬಿದ್ದು ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿರೋ ದುರದೃಷ್ಟಕರ ಘಟನೆ ಕೇರಳದ ಕೊಟ್ಟಾಯಂನ ಪಾಲಾದಲ್ಲಿ ನಡೆದಿದೆ.ಮೃತರನ್ನು ರಾಮಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕುರವಿಲಂಗಾಡ್ ಮೂಲದ ಜೋಬಿ ಜಾರ್ಜ್ ಎಂದು ಗುರುತಿಸಲಾಗಿದೆ.

ರಾಮಪುರಂನ ಬಸ್ ಡಿಪೋ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಜೂಜಾಟದ ಗ್ಯಾಂಗ್ ಇದೆ ಎಂಬ ಮಾಹಿತಿಯ ಮೇರೆಗೆ ಜಾರ್ಜ್ ಕಟ್ಟಡಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿ ಕಾರಿಡಾರ್ ನಲ್ಲಿ ಜಾರಿದ ಪರಿಣಾಮ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.ಕೂಡಲೇ ಜಾರ್ಜ್ ಅವರನ್ನು ಅವರ ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  'ಕೈ' ಸಂಸದರೆಲ್ಲರ ರಾಜೀನಾಮೆ.?                                                    ➤ ಪಕ್ಷದ ಮುಂದೆ ಪ್ರಸ್ತಾವವಿಟ್ಟ ಯುವ ಎಂ.ಪಿಗಳು

 

 

error: Content is protected !!
Scroll to Top