ಕೊನೆಗೂ ಜಯದತ್ತ ದಾಪುಗಾಲಿಟ್ಟ ಕಾಂಗ್ರೆಸ್ ನ ಅಶೋಕ್ ರೈ ➤ ಅಂತಿಮ ಘೋಷಣೆ ಮಾತ್ರ ಬಾಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.13. ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಗೆಲುವು ಬಹುತೇಕ ಖಚಿತಗೊಂಡಿದ್ದು, 15ನೇ ಸುತ್ತಿನ ಮತ ಎಣಿಕೆಯಲ್ಲಿ 2673 ಮತಗಳಿಂದ ಅಶೋಕ್ ರೈ ಮುನ್ನಡೆ ಸಾಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ವಿರುದ್ದ ಬಹುತೇಕ ಗೆಲುವು ಫಿಕ್ಸ್ ಆದಂತಿದ್ದು, ಅಂತಿಮ ಘೋಷಣೆ ಮಾತ್ರ ಬಾಕಿ ಉಳಿದಿದೆ. ಅಶೋಕ್ ರೈ ಒಟ್ಟು 61797 ಮತಗಳನ್ನು ಪಡೆದಿದ್ದು, 59124 ಮತಗಳನ್ನು ಅರುಣ್ ಪುತ್ತಿಲ ಪಡೆದುಕೊಂಡಿದ್ದಾರೆ. ಕೊನೆ ಕ್ಷಣದವರೆಗೂ ಜಿದ್ದಾಜಿದ್ದಿನ ಹೋರಾಟ ನೀಡಿದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಕರಾವಳಿಯಲ್ಲಿ ಮತ್ತೆ ಎರಡು ದಿನಗಳ ಕಾಲ ರಾತ್ರಿ ನಿಷೇಧಾಜ್ಞೆ ಮುಂದುವರಿಕೆ ➤ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ವ್ಯಾಪಾರ ಮಾಡಲು ಅವಕಾಶ

error: Content is protected !!
Scroll to Top