ಮಂಗಳೂರು: ಸರಣಿ ಅಪಘಾತ- 10ಕ್ಕೂ ಹೆಚ್ಚು ವಾಹನಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ. 13. ಸರಣಿ ಅಪಘಾತ ಸಂಭವಿಸಿದ ಪರಿಣಾಮ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡ ಘಟನೆ ನಗರದ ಬಾವುಟಗುಡ್ಡೆ ಬಳಿ ಸಂಭವಿಸಿದೆ.


ಬಾವುಟಗುಡ್ಡೆ ಕಡೆಯಿಂದ ಜ್ಯೋತಿ ವೃತ್ತದ ಕಡೆಗೆ ತೆರಳುತ್ತಿದ್ದ ಬಸ್ ಅಕ್ಕಪಕ್ಕದಲ್ಲಿದ್ದ ಕಾರು, ಬೈಕ್ ಗಳಿಗೆ ಢಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಒಂದು ಬೈಕ್ ಬಸ್ ನಡಿಗೆ ಬಿದ್ದು ಸವಾರ ಅಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Scroll to Top