ಮತ ಎಣಿಕಾ ಕೇಂದ್ರಕ್ಕೆ ಲುಂಗಿಯಲ್ಲಿ ಮೊಬೈಲ್ ಕಟ್ಟಿಕೊಂಡು ಬಂದು ಸಿಕ್ಕಿಬಿದ್ದ ಏಜೆಂಟ್…!

(ನ್ಯೂಸ್ ಕಡಬ) newskadaba.com ಉಡುಪಿ, ಮೇ. 13. ಇಲ್ಲಿನ ಮತ ಎಣಿಕಾ ಕೇಂದ್ರಕ್ಕೆ ವ್ಯಕ್ತಿಯೋರ್ವ ತನ್ನ ಲುಂಗಿಯಲ್ಲಿ ಮೊಬೈಲ್ ಅಡಗಿಸಿಟ್ಟುಕೊಂಡು ಬಂದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಸದಾಶಿವ ಕಂಚಗೋಡು ಎಂಬಾತ ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್ ಕೊಂಡೊಯ್ಯಲು ಹೋಗಿ ಸಿಕ್ಕಿಬಿದ್ದ ವ್ಯಕ್ತಿ. ಈತ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ಏಜೆಂಟ್ ಎಂದು ತಿಳಿದುಬಂದಿದೆ. ಎಣಿಕಾ ಕೇಂದ್ರದೊಳಗೆ ಮೊಬೈಲ್ ನಿರ್ಬಂಧಿಸಲಾಗಿದ್ದರೂ, ಸದಾಶಿವ ಕಂಚಗೋಡು ತನ್ನ ಲುಂಗಿಯಲ್ಲಿ ಮೊಬೈಲ್ ಅನ್ನು ಕಟ್ಟಿಕೊಂಡು ಬಂದಿದ್ದ ಎನ್ನಲಾಗಿದೆ. ಮೊದಲ ಪ್ರವೇಶದಲ್ಲಿ ಪೊಲೀಸರ ಗಮನಕ್ಕೆ ಬಾರದಂತೆ ಒಳಗೆ ಪ್ರವೇಶಿಸಿದ ಸದಾಶಿವರನ್ನು ಎರಡನೇ ದ್ವಾರದಲ್ಲಿ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಲುಂಗಿಯಲ್ಲಿ ಮೊಬೈಲ್ ಕಟ್ಟಿರುವುದು ಪತ್ತೆಯಾಗಿದೆ. ಬಳಿಕ ಆತನಿಂದ ಮತಗಟ್ಟೆ ಪ್ರವೇಶ ಪಾಸ್ ಅನ್ನು ಕಿತ್ತುಕೊಂಡ ಪೊಲೀಸರು ಕೇಂದ್ರದಿಂದ ಹೊರಗೆ ಕಳುಹಿಸಿರುವುದಾಗಿ ತಿಳಿದುಬಂದಿದೆ.

Also Read  ಸಮಾವೇಶದ ಫ್ಲೆಕ್ಸ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾಕ್ ► ಎಸ್ಡಿಪಿಐ ಪುತ್ತೂರು ನಗರ ಅಧ್ಯಕ್ಷ ಮೃತ್ಯು

 

error: Content is protected !!
Scroll to Top