ಪ್ರೇಯಸಿಯ ಮದುವೆಯಿಂದ ಬಂದು ಆತ್ಮಹತ್ಯೆಗೆ ಶರಣಾದ ಯುವಕ

(ನ್ಯೂಸ್ ಕಡಬ)newskadaba.com ಛತ್ತೀಸ್​ಗಢ, ಮೇ.08. ಇಲ್ಲಿನ ಸುಭಾಷ್ ನಗರ ಬಡಾವಣೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೂ ಮುನ್ನ ಇದ್ದಿಲಿನಿಂದ ಗೋಡೆಯ ಮೇಲೆ ಪ್ರಿಯತಮೆ ಈಗ ನಾನು ಹೋಗುತ್ತಿದ್ದೇನೆ, ನಾನು ಎಂದಿಗೂ ಹಿಂತಿರುಗುವುದಿಲ್ಲ, ನೀನು ಸಂತೋಷವಾಗಿರು ಎಂದು ಬರೆದಿದ್ದಾನೆ.

ಮೇಲ್ನೋಟಕ್ಕೆ ಯುಕನ ಆತ್ಮಹತ್ಯೆಗೆ ಪ್ರೇಮ ಪ್ರಕರಣವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸದ್ದಾರೆ. ಪಂಕಜ್ ಟೊಪ್ಪೋ ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.

 

error: Content is protected !!
Scroll to Top