ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಲೇಡಿ ಕಾನ್ಸ್​ಟೆಬಲ್..!

(ನ್ಯೂಸ್ ಕಡಬ)Newskadaba.com ಹೈದರಾಬಾದ್,ಮೇ.08 ಯಸ್ಸಾದರೂ ಮದುವೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಮನನೊಂದು ಮಹಿಳಾ ಕಾನ್ಸ್​ಟೆಬಲ್ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.ಸುರೇಖಾ (28) ಮೃತ ಲೇಡಿ ಕಾನ್ಸ್​ಟೆಬಲ್. ಈಕೆ ತೆಲಂಗಾಣದ ಕಂದಕುರ ಮಂಡಲದ ಜೈತವರಮ್​ ಗ್ರಾಮದ ನಿವಾಸಿ.

ಹೈದರಾಬಾದ್​ನ ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಸಾಲಿಬಂದ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಶಮ್ಶಿರಾಗಂಜ್​ ಕಾಲ್ವಗಡ್ಡದಲ್ಲಿ ತನ್ನ ಅಕ್ಕನ ಮನೆಯಲ್ಲಿ ಸುರೇಖಾ ವಾಸವಿದ್ದಳು. ಸುರೇಖಾ  ಒಂದು ವರ್ಷದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ ಮುರಿಬಿದ್ದಿತ್ತು. ಇದರಿಂದ ತನ್ನ ಮದುವೆ ಎಂದಿಗೂ ನಡೆಯುವುದಿಲ್ಲ ಎಂದು ಮನನೊಂದ ಸುರೇಖಾ ತನ್ನ ಅಕ್ಕನ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Also Read  ವಿದ್ಯುತ್ ಶಾಕ್ ತಗುಲಿ ಯುವಕನೋರ್ವ ಮೃತ್ಯು..!

 

 

error: Content is protected !!
Scroll to Top