ಬೆಳ್ತಂಗಡಿ: ವಿಭಿನ್ನ ಶೈಲಿಯಲ್ಲಿ ಪ್ರಚಾರ ಮಾಡಿದ ಕೈ ಅಭ್ಯರ್ಥಿ ರಕ್ಷಿತ್ ಶಿವರಾಂ

(ನ್ಯೂಸ್ ಕಡಬ) newskadaba.com. ಬೆಳ್ತಂಗಡಿ, ಮೇ 04. ಚುನಾವಣೆಗೆ ಇನ್ನು ಕೇವಲ 6 ದಿನಗಳಷ್ಟೇ ಬಾಕಿ ಇದೆ. ಮತದಾರರ ಮನಗೆಲ್ಲಲು ಅಭ್ಯರ್ಥಿಗಳು ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಲು ವಿಭಿನ್ನ ಶೈಲಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನನ್ನ ಬೂತ್ ನನ್ನ ಹೊಣೆ” ಎಂದು ಕಾರ್ಯಕರ್ತರಿಗೆ ಹೊಸ ಜವಾಬ್ದಾರಿ ಮೂಲಕ ಪ್ರಚಾರಮಾಡಲು ತಯಾರಿ ಮಾಡಿಕೊಂಡಿದ್ದು, ಈ ವಿನೂತನ ಶೈಲಿಯ ಪ್ರಚಾರಕ್ಕೆ ಮಾಜಿ ಶಾಸಕ ವಸಂತ ಬಂಗೇರ ಚಾಲನೆ ನೀಡಿದ್ದಾರೆ. ಈ ವೇಳೆ ಬೂತ್ ಮಟ್ಟದಲ್ಲಿ ನಾಳೆ ಪ್ರಚಾರ ನಡೆಸಲು ಕಾರ್ಯಕರ್ತರಿಗೆ ಮಾಜಿ ಶಾಸಕರು ಕರೆ ನೀಡಿದ್ದಾರೆ.

Also Read  50,000ರೂ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಪ್ರತಿಯೊಬ್ಬ ಕಾರ್ಯಕರ್ತರು ನಾಳೆ ತಮ್ಮ ಬೂತ್ ಗಳಲ್ಲಿ ಮನೆ ಮನೆ ಪ್ರಚಾರ ಮಾಡಲು ಪ್ಲಾನ್ ಮಾಡಿಕೊಂಡಿದ್ದು ಈ ಮೂಲಕ ಬಿಜೆಪಿಯ ತಂತ್ರಕ್ಕೆ ಠಕ್ಕರ್ ನೀಡುತ್ತಿದ್ದಾರೆ.”ನನ್ನ ಬೂತ್ ನನ್ನ ಹೊಣೆ” ಕಾರ್ಯಕ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, “ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷಕ್ಕೆ ಜೀವಾಳ” ಎಂದು ರಕ್ಷಿತ್ ಶಿವರಾಂ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿದ್ದಾರೆ.

error: Content is protected !!
Scroll to Top