ಬೆಂಗಳೂರಿನಲ್ಲಿ ಮಳೆ ಅವಾಂತರ..! ➤ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.04 ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ ಉಂಟಾಗಿತ್ತು. ಇತ್ತೀಚೆಗಷ್ಟೇ ಈ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ನೀರು ಸೋರಿಕೆಯಾಗಿರುವುದಕ್ಕೆ ಭಾರೀ ಆಕ್ರೋಶ ಉಂಟಾಗಿದೆ.

ಟರ್ಮಿನಲ್‌ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೆಟಿಜನ್‌ಗಳು ರೂ 5,000 ಕೋಟಿ ಟರ್ಮಿನಲ್‌ನ “ನೈಜ ಮೌಲ್ಯ” ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಹೀಗೆ ಟರ್ಮಿನಲ್‌ನಲ್ಲಿ ನೀರು ತುಂಬಿಕೊಂಡಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಕರ್ನಾಟಕ ಬಂದ್: ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ; ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ತಗ್ಗಿದ ಪ್ರಯಾಣಿಕರ ಸಂಖ್ಯೆ -ಹಲವೆಡೆ ನೀರಸ ಪ್ರತಿಕ್ರಿಯೆ

 

 

error: Content is protected !!
Scroll to Top