ಜಾಮೀನು ಕೊಡದ ಜಡ್ಜ್​ಗೆ ಶಿಕ್ಷೆ ನೀಡಿದ ಸುಪ್ರೀಂ ಕೋರ್ಟ್..!‌

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.04 ನ್ಯಾಯಾಂಗ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದ ಸೆಷನ್ಸ್ ಜಡ್ಜ್ ಒಬ್ಬರನ್ನು ಕೋರ್ಟ್ ಕಾರ್ಯಗಳಿಂದ ವಾಪಸ್ ಕರೆಸುವ ಶಿಕ್ಷೆ ನೀಡಿರುವ ಸುಪ್ರೀಂ ಕೋರ್ಟ್, ಸಂಬಂಧಿತ ನ್ಯಾಯಾಧೀಶರನ್ನು ನ್ಯಾಯಾಂಗ ಅಕಾಡೆಮಿಗೆ ಕಳಿಸುವಂತೆ  ಅಲಹಾಬಾದ್ ಹೈಕೋರ್ಟ್​ಗೆ ನಿರ್ದೇಶಿಸಿದೆ.

ಆರೋಪಿಗಳಿಗೆ ಜಾಮೀನು ನೀಡುವ ವಿಚಾರದಲ್ಲಿ ಉದಾರವಾಗಿರಬೇಕೆಂಬ ಸುಪ್ರೀಂ ಕೋರ್ಟ್​ನ ಹಲವು ನಿರ್ದೇಶನಗಳಿದ್ದಾಗ್ಯೂ ಅವುಗಳನ್ನು ಗೌರವಿಸದಿರುವ ಪ್ರವೃತ್ತಿ ಮುಂದುವರಿದಿರುವ ಫಲಿತಾಂಶ ಇದಾಗಿದೆ. ದೇಶದಾದ್ಯಂತ ಕೋರ್ಟ್​ಗಳು ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್​ಕೌಲ್ ಮತ್ತು ಅಹ್ಸಾನುದ್ದಿನ್ ಅಮಾನುಲ್ಲಾ ಇದ್ದ ನ್ಯಾಯ ಪೀಠಕ್ಕೆ ಅಮಿಕಸ್ ಕ್ಯೂರಿ ತಿಳಿಸಿದ ನಂತರ ಸವೋನ್ನತ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

Also Read  ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

 

 

 

error: Content is protected !!
Scroll to Top