ಧಾರಾಕಾರ ಮಳೆಗೆ  ಕುಸಿದು ಬಿದ್ದ ಮನೆ..! ➤20 ದಿನದ ಹಸುಗೂಸು ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)Newskadaba.com ಕೊಪ್ಪಳ,ಮೇ.02 ಧಾರಾಕಾರ ಮಳೆಗೆ ಮನೆಯೊಂದು ಕುಸಿದು ಬಿದ್ದು, 20 ದಿನದ ಹಸುಗೂಸು ಹಾಗೂ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ನಡೆದಿದೆ.ಮನೆ ಕುಸಿತದಿಂದ ಹಸುಗೂಸು ಹಾಗೂ ವೃದ್ಧೆ ಫಕೀರಮ್ಮ (60) ಸಾವನ್ನಪ್ಪಿದ್ದಾರೆ.

ಬೆಳಗ್ಗಿನ ಜಾವ ಎಲ್ಲರೂ ಮಲಗಿದ್ದ ವೇಲೆ ದುರ್ಘಟನೆ ನಡೆದಿದೆ. ಬಾಣಂತಿ ಕನಕಮ್ಮಳಿಗೆ ಗಾಯಗಳಾಗಿದ್ದು, ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸದ್ಯ ಮನೆಯ ಹೊರಗಡೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Also Read  ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ..! ➤ ಷಡಕ್ಷರಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

 

error: Content is protected !!
Scroll to Top