ಚಾಲಕನ ನಿಯಂತ್ರಣ ತಪ್ಪಿದ ಸೈಕಲ್‌‌ಗೆ ಢಿಕ್ಕಿ ಹೊಡೆದ ಕಾರು..! ➤ ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)Newskadaba.com ಕೋಟ,ಮೇ.02 ಚಾಲಕನ ನಿಯಂತ್ರಣ ತಪ್ಪಿದ ಕಾರು ಸೈಕಲ್‌‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಸಾಲಿಗ್ರಾಮ ಡಿವೈನ್ ಪಾರ್ಕ್ ಎದುರುಗಡೆ ನಡೆದಿದೆ.ಸೈಕಲ್ ಸವಾರ ಗುಂಡ್ಮಿ ಭಗವತಿ ರಸ್ತೆಯ ಕೇಶವ ಮರಕಾಲ (41) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ವೇಗವಾಗಿ ಹೋಗುತ್ತಿದ್ದ ಸೈಕಲ್ ಚಾಲಕನ ನಿಯಂತ್ರಣ ತಪ್ಪಿ ಗುಂಡ್ಮಿಯಿಂದ ಸಾಲಿಗ್ರಾಮ ಕಡೆ ಹೋಗುತ್ತಿದ್ದ ಸೈಕಲ್ ಸವಾರನಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ಸೈಕಲ್ ಸವಾರ ಕೇಶವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರು ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

Scroll to Top