ಪುತ್ತೂರು: ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ ➤ಸವಾರ ಪವಾಡ ಸದೃಶ ಪಾರು

ನ್ಯೂಸ್ ಕಡಬ) newskadaba.com.ಪುತ್ತೂರು, ಮೇ.1.  ಪುತ್ತೂರಿನ ಮಂಜಲ್ಪಡ್ಪು ಬೈಪಾಸ್ ಜಂಕ್ಷನ್ ಬಳಿ ಡಿಯೋ ದ್ವಿಚಕ್ರ ವಾಹನ‌ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಪವಾಡ ರೀತಿಯಲ್ಲಿ ಪಾರಾದ  ಘಟನೆ ನಡೆದಿದೆ.

ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಎದುರಿನಿಂದ ಬಂದ ಡಿಯೋ ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿ‌ ಹೊಡೆದಿದೆ.  ಸವಾರನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಸವಾರ ಪವಾಡಸದೃಶವಾಗಿ ಪಾರಾಗಿದ್ದಾನೆ.

Scroll to Top