ಮಂಗಳೂರು – ಮುಂಬಯಿ ಮಧ್ಯೆ ಮತ್ಸ್ಯ ಗಂಧ ರೈಲು ಸಂಚಾರಕ್ಕೆ 25ವರ್ಷದ ಸಂಭ್ರಮ

(ನ್ಯೂಸ್ ಕಡಬ) newskadaba.com. ಉಡುಪಿ, ಮೇ.1.  ಮಂಗಳೂರು ಹಾಗೂ ಮುಂಬಯಿ ಮಧ್ಯೆ ಓಡಾಡುವ ಮತ್ಸ್ಯ ಗಂಧ ಎಕ್ಸ್‌ಪ್ರೆಸ್‌ ರೈಲು 1998ರ ಮೇ 1ರಂದು ತನ್ನ ಮೊದಲ ದಿನದ ಓಡಾಟವನ್ನು ಆರಂಭಿಸಿತು. 2023ರ ಮೇ 1ಕ್ಕೆ ಈ ಮಾರ್ಗದಲ್ಲಿ ಮತ್ಸ್ಯ ಗಂಧ ಎಕ್ಸ್‌ಪ್ರೆಸ್‌ ಸಂಚಾರವನ್ನು ಆರಂಭಿಸಿ 25 ವರ್ಷ ಪೂರ್ಣಗೊಳ್ಳಲಿದೆ.

ಉಡುಪಿ ರೈಲು ಯಾತ್ರಿ ಸಂಘವು ಈ ಅವಿಸ್ಮರಣೀಯ ರೈಲು ಓಡಾಟವನ್ನು ವಿಶೇಷ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಮೇ 1ರ ಮಧ್ಯಾಹ್ನ 3.48ಕ್ಕೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಉಡುಪಿ ತಲುಪಲಿದೆ. ಅಂದು ರೈಲಿನ ಎಂಜಿನ್‌ ಎದುರುಗಡೆ, ಸಂಘದ ಪರವಾಗಿ ಬ್ಯಾನರ್‌ ಒಂದನ್ನು ಕಟ್ಟಿ, ಆ ರೈಲಿನ ಇಬ್ಬರು ಲೋಕೋ ಪೈಲೆಟ್‌ ಹಾಗೂ ಗಾರ್ಡ್‌ಗೆ ಹೂ ಗುತ್ಛ ನೀಡಿ, ಆನಂತರ ಅಲ್ಲಿದ್ದವರಿಗೆ ಸಿಹಿ ತಿಂಡಿ ನೀಡಿ ಸಂಭ್ರಮಿಸಲಿದೆ ಎಂದು ಸಂಘದ ಅಧ್ಯಕ್ಷ ಶೇಖರ್‌ ಕೋಟ್ಯಾನ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Scroll to Top