(ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.27. ತನ್ನನ್ನು ಬಿಟ್ಟು ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯನೊಂದಿಗೆ ಮಹಿಳೆ ಗಲಾಟೆ ಮಾಡಿದ ಪರಿಣಾಮ ಕೋಪಗೊಂಡ ಗೆಳೆಯ ಆಕೆಯನ್ನು ಹತ್ಯೆ ಮಾಡಿರುವ ಘಟನೆಯೊಂದು ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶರಗುಣಂ (35) ಹತ್ಯೆಯಾದ ಮಹಿಳೆಯಾಗಿದ್ದಾರೆ. ಆರೋಪಿ ಗಮೇಶ್ ಮಹಿಳೆಯನ್ನು ಹತ್ಯೆ ಮಾಡಲು ಯತ್ನಿಸಿದ್ದು, ಬಳಿಕ ಆಕೆಯನ್ನು ಆತನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆಂದು ಪೊಲೀಸರು ಹೇಳಿದ್ದಾರೆ.
Also Read ಕನ್ನಡ ಶಾಲೆಗಳ ನಿರ್ಲಕ್ಷ್ಯ ನವೆಂಬರ್ 1ರಂದು 'ಕರಾಳ ದಿನ' ಆಚರಿಸಲು ರಾಜ್ಯದ ಖಾಸಗಿ ಶಾಲೆಗಳಿಂದ ನಿರ್ಧಾರ..!
ಮೃತ ಮಹಿಳೆ ಶರಗುಣಂ ಮೂಲತಃ ತಮಿಳುನಾಡು ಮೂಲದವರಾಗಿದ್ದು, ಕುರುಬರಹಳ್ಳಿಯ ಜೆಸಿ.ನಗರದ ಕಾಲೋನಿಯಲ್ಲಿ ತನ್ನ ಪತಿ ಶಿವಕುಮಾರ್ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು.