ನಿಷೇಧಿತ PFI ಮರು ಸ್ಥಾಪನೆಗೆ ಯತ್ನ ➤ 4 ರಾಜ್ಯಗಳಲ್ಲಿ ಮತ್ತೆ NIA ದಾಳಿ

(ನ್ಯೂಸ್ ಕಡಬ)newskadaba.com ನವದೆಹಲಿ, ಏ. 27. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದ 16 ಸ್ಥಳಗಳಲ್ಲಿ ಶೋಧ ನಡೆಸಿದೆ‌.


ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದಲ್ಲಿ ಪಿಎಫ್‌ಐ ಜೊತೆಗಿನ‌ ನಂಟು ಹೊಂದಿರುವವರು ಮತ್ತು ಶಂಕಿತ ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.


ಎನ್‌ಐಎ ಶೋಧಿಸಿದ ಸ್ಥಳಗಳಲ್ಲಿ ಬಿಹಾರದಲ್ಲಿ 12, ಉತ್ತರ ಪ್ರದೇಶದಲ್ಲಿ ಎರಡು ಮತ್ತು ಪಂಜಾಬ್‌ನ ಲೂಧಿಯಾನ ಮತ್ತು ಗೋವಾದಲ್ಲಿ ತಲಾ ಒಂದು ಸ್ಥಳಗಳು ಸೇರಿವೆ ಎಂದು ಮೂಲಗಳು ತಿಳಿಸಿದೆ.

Also Read  ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ➤ ಒಂದೇ ದಿನ 800 ಕೇಸ್ ಪತ್ತೆ

 

error: Content is protected !!
Scroll to Top