(ನ್ಯೂಸ್ ಕಡಬ)newskadaba.com ಕೋಲಾರ, ಏ.23. ಬಾಲಕನೊಬ್ಬ ನಮಾಜ್‌ಗೆ ಹೋಗುವಾಗ ಬೀದಿ ನಾಯಿಗಳು ಗುಂಪು ಸೇರಿಕೊಂಡು ದಾಳಿ ಮಾಡಿ ಕಚ್ಚಿ ಎಳೆದಿರುವ ದುರ್ಘಟನೆ ಕೋಲಾರ ನಗರದಲ್ಲಿ ಬೆಳಗಿನ ಜಾವ ನಡೆದಿದೆ.
ಕೋಲಾರದ ರಹಮತ್ ನಗರದ 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಜಾಗರಣೆಯನ್ನು ಮಸೀದಿಯಲ್ಲಿ ಮುಗಿಸಿದ್ದ.ಮನೆಗೆ ಬಂದು ಮತ್ತೆ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ. ಈ ವೇಳೆ ನಾಯಿಗಳು ಬಾಲಕನ ಮೇಲೆ ದಿಢೀರ್ ದಾಳಿ ಮಾಡಿವೆ.