(ನ್ಯೂಸ್ ಕಡಬ) newskadaba.com. ಲಂಡನ್, ಏ.18. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಹೊಚ್ಚ ಹೊಸ ವಿಷಯಗಳು ವೈರಲ್ ಆಗುತ್ತಿವೆ. ಈ ಬಾರಿ ವಿಶ್ವದ ಅತಿ ಉದ್ದದ ಮೂಗನ್ನು ಹೊಂದಿರುವ, 300 ವರ್ಷಗಳಿಂದ ಅಜೇಯ ದಾಖಲೆ ಹೊಂದಿರುವ ವ್ಯಕ್ತಿಯ ಬಗ್ಗೆ ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿಯೂ ದಾಖಲಾಗಿದೆ. ಈ ವ್ಯಕ್ತಿ ಎಷ್ಟು ಪ್ರಸಿದ್ಧನಾಗಿದ್ದಾನೆಂದರೆ ಲಂಡನ್ ಮ್ಯೂಸಿಯಂನಲ್ಲಿ ಆತನ ಮೇಣದ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ.
ವಿಶ್ವದ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿಯ ಹೆಸರು ಥಾಮಸ್ ವುಡ್‌ಹೌಸ್. ಅವರ ಚಿತ್ರವನ್ನು ಪ್ಯೂಬಿಟಿ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವರದಿಯ ಪ್ರಕಾರ, ಥಾಮಸ್ ವೆಡ್ಡರ್ಸ್ 18 ನೇ ಶತಮಾನದಲ್ಲಿ ಸರ್ಕಸ್ ಪ್ರದರ್ಶಕರಾಗಿದ್ದರು. ಅವರು ವಿಶ್ವದ ಅತಿ ಉದ್ದದ ಮೂಗು ಹೊಂದಿದ್ದರು. ಇದು 7.5 ಇಂಚುಗಳಷ್ಟು ಉದ್ದವಿತ್ತು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್‌ನಲ್ಲಿ, ಈ ವ್ಯಕ್ತಿಗೆ ಮೀಸಲಾಗಿರುವ ಪುಟವೂ ಇದೆ. ಮೂಲಗಳ ಪ್ರಕಾರ, ವಾಡ್‌ಹೌಸ್ 1770ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದರು. ಸರ್ಕಸ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ಅವರ ತಲೆಯ ಮೇಣದ ಪ್ರತಿಕೃತಿಯನ್ನು ಲಂಡನ್‌ನ ರಿಪ್ಲೇಸ್ ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಈ ಫೋಟೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಟರ್ಕಿಯ ಮೆಹ್ಮೆತ್ ಓಝುರೆಕ್ ಅವರು ಜೀವಂತ ವ್ಯಕ್ತಿಯ ವಿಶ್ವದ ಉದ್ದನೆಯ ಮೂಗು ಹೊಂದಿರುವ ದಾಖಲೆಯನ್ನು ಹೊಂದಿದ್ದಾರೆ. ಎರಡು ವರ್ಷಗಳ ಹಿಂದೆ, ಗಿನ್ನಿಸ್ ವಿಶ್ವ ದಾಖಲೆಗಳು ಈ ದಾಖಲೆಯನ್ನು ದೃಢಪಡಿಸಿದವು. ಅವರ ಮೂಗು 3.46 ಇಂಚುಗಳಷ್ಟು ಉದ್ದವಿದೆ.