ಪೊಲೀಸ್ ‌ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಏ.15. ಮಹಿಳೆಯೊಬ್ಬರು ಮೂಡಿಗೆರೆ ಪೊಲೀಸ್ ಠಾಣೆಯ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.


ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯಾಗಿದ್ದು, ಆಕೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹಳೆ ಮೂಡಿಗೆರೆ ಗ್ರಾಮದ ಶಿಲ್ಪ ಮತ್ತು ಆಕೆಯ ಅಕ್ಕನ ನಡುವೆ 2022ರಲ್ಲಿ ಗಲಾಟೆಯಾಗಿತ್ತು, ಈ ವಿಷಯಕ್ಕೆ ಇಬ್ಬರು ಅಕ್ಕ ತಂಗಿಯರು ದೂರು ನೀಡಲು ಮೂಡಿಗೆರೆ ಠಾಣೆಗೆ ಹೋಗಿದ್ದರು ಎನ್ನಲಾಗಿದೆ.

Scroll to Top