ಮಾಜಿ ಡಿಸಿಎಂ ಲಕ್ಷ್ಮಣ್‌ ಸವಧಿ ಬಿಜೆಪಿ ತೊರೆಯುತ್ತಿರುವುದು ಬೇಸರದ ಸಂಗತಿ’- ಸಿಎಂ

(ನ್ಯೂಸ್ ಕಡಬ) newskadaba.com.ಬೆಂಗಳೂರು. .14. ಅಥಣಿ ಟಿಕೆಟ್ ಕೈ ತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ” ಲಕ್ಷ್ಮಣ್‌ ಸವದಿ ಕಾಂಗ್ರೆಸ್‌ ಸೇರಿರುವುದು ಗೊತ್ತಿರುವ ವಿಚಾರವಾಗಿದೆ, ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದರು.

ಲಕ್ಷ್ಮಣ್‌ ಸವದಿ ಕಾಂಗ್ರೆಸ್ ನಲ್ಲಿ ಭವಿಷ್ಯ ಕಾಣಿಸಿದೆ ಅದಕ್ಕೆ ಹೋಗಿದ್ದಾರೆ, ಬೇಸರದ ಸಂಗತಿ ಇದು, ಸವದಿಗೆ ಉತ್ತಮ ಭವಿಷ್ಯ ಬಿಜೆಪಿಯಲ್ಲೇ ಇತ್ತು ಕೆಲವೊಮ್ಮೆ ರಾಜಕೀಯ ಸನ್ನಿವೇಶದಲ್ಲಿ ಇಂತಹ ಘಟನೆಗಳು ನಡೆಯುತ್ತದೆ ಎಂದಿದ್ದಾರೆ.  ಲಕ್ಷ್ಮಣ್‌ ಸವದಿ ಜೊತೆ ಹಲವು ವರ್ಷಗಳಿಂದ ನಾನು ಒಟ್ಟಿಗೆ ಕೆಲಸ ಮಾಡದ್ದೇನೆ. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಟಿಕೆಟ್‌ ಸಿಗದಿದ್ದಕ್ಕೇ ನನಗೂ ಬೇಸರ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

error: Content is protected !!
Scroll to Top