(ನ್ಯೂಸ್ ಕಡಬ)newskadaba.com ಜೈಪುರ, ಏ.13. ರಾಜಸ್ತಾನದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿಯವರು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನನ್ನ ಒಳ್ಳೆಯ ಮಿತ್ರ ಮತ್ತು ಪ್ರಧಾನಿಯಾಗಿ ನನ್ನ ಕೆಲಸ ಮಾಡಲು ಬಿಟ್ಟವರು ಎಂದು ಬಣ್ಣಿಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ಗೆ ಚಾಲನೆ ನೀಡಿದ ಮೋದಿಯವರು ಗೆಹ್ಲೋಟ್ ಜೊತೆಗೆ ಕಾಣಿಸಿಕೊಂಡರು. ರಾಜಸ್ತಾನದ ರೈಲು ಯೋಜನೆಯಾದ್ದರಿಂದ ಇದರಲ್ಲಿ ಅಚ್ಚರಿ ಏನಿಲ್ಲ. ಆದರೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಿ ಹೊಗಳಿದ್ದು ಮಾತ್ರ ಕೆಲವರಿಗೆ ಅಚ್ಚರಿ ಎನಿಸಿದೆ.
Also Read ಮರಕ್ಕೆ ಢಿಕ್ಕಿ ಹೊಡೆದು ರಸ್ತೆ ಬದಿ ಉರುಳಿ ಬಿದ್ದ ಸೇನಾ ವಾಹನಕ್ಕೆ ಹೊತ್ತಿಕೊಂಡ ಬೆಂಕಿ ➤ ಮೂವರು ಸಜೀವ ದಹನ