ನ್ಯೂಸ್ ಕಡಬ) newskadaba.com. ಬೆಂಗಳೂರು, ಏ.13. ಬೆಂಗಳೂರು ಕರಗೋತ್ಸವದ ವೇಳೆ ಕರ ಹೊತ್ತಿದ್ದ ಪೂಜಾರಿ ಮೇಲೆ ರಾಸಾಯನಿಕ ದಾಳಿ ನಡೆದಿತ್ತು. ಬೆಂಗಳೂರು ಕರಗೋತ್ಸವದ ಹಿನ್ನೆಲೆಯಲ್ಲಿ ಪೂಜಾರಿ ಜ್ಞಾನೇಂದ್ರ ಕರಗ ಹೊತ್ತಿದ್ದರು. ಅಂದು ಮಧ್ಯರಾತ್ರಿ ಭಕ್ತಾದಿಗಳ ಗುಂಪಿನಲ್ಲಿ ಆರೋಪಿ ಆದಿನಾರಾಯಣ ರಾಸಾಯನಿಕ ದ್ರಾವಣ ಸಿಂಪಡಿಸಿದ್ದ. ಇದರಿಂದ ಪೂಜಾರಿಯ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಸುಟ್ಟ ಗಾಯಗಳಾಗಿವೆ.
ಬೆಂಗಳೂರಿನ ಜೆ.ಪಿ.ನಗರದ ನಿವಾಸಿ ಆದಿ ನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









