ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ➤ ಬಡ ವೃದ್ಧೆಗೆ ಹೊಸ ಬಟ್ಟೆ ಕೊಟ್ಟು ಮನೆಗೆ ಬಿಟ್ಟು ಬಂದ ಅಧಿಕಾರಿ

ನ್ಯೂಸ್ ಕಡಬ) newskadaba.com. ಮಧ್ಯಪ್ರದೇಶ, .13. ಅನಾರೋಗ್ಯದಿಂದ ಮಲಗಿದ್ದ 80 ವರ್ಷದ ವೃದ್ಧೆಗೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದು ಮಹಿಳಾ ಪೊಲೀಸ್ ಅಧಿಕಾರಿ ಸುದ್ದಿಯಾಗಿದ್ದಾರೆ.

ಮಧ್ಯಪ್ರದೇಶದ ದಾಮೋಹ್‌ನ ಮಹಿಳಾ ಪೊಲೀಸ್ ಅಧಿಕಾರಿ ಸುರಭಿ 80 ವರ್ಷದ ಮಹಿಳೆ ಬೀದಿಯಲ್ಲಿ ಮಲಗಿದ್ದನ್ನು ಕಂಡು ವಿಚಾರಿಸಿದ್ದಾರೆ.ಮಹಿಳೆ ತೀವ್ರ ಅಸ್ವಸ್ಥಗೊಂಡಿರುವುದನ್ನು ಕಂಡ ಸುರುಭಿ ತೆಂಡುಖೇಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೃದ್ಧೆ ಹರಿದ ಬಟ್ಟೆ ತೊಟ್ಟಿದ್ದರಿಂದ ಸುರುಭಿ ಹೊಸ ಬಟ್ಟೆ ತಂದು ಕೊಟ್ಟಿದ್ದಾರೆ. ಬಳಿಕ ಆಕೆಗೆ ಹಣ್ಣುಗಳನ್ನು ತಂದುಕೊಟ್ಟು ನಂತರ ಅವರನ್ನು ಮನೆಗೆ ತಲುಪಿಸಿದ್ದಾರೆ.  ದಾಮೋಹ್ ಪೊಲೀಸ್ ಸೂಪರಿಂಟೆಂಡೆಂಟ್ ಟ್ವಿಟ್ಟರ್‌ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.ಇದರಲ್ಲಿ ಸಬ್ ಇನ್‌ಸ್ಪೆಕ್ಟರ್ ಸುರುಭಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶಂಸೆ ವ್ಯಕ್ತವಾಗಿದೆ.

error: Content is protected !!
Scroll to Top