ಸುಳ್ಯ: ಕೆರೆಯಲ್ಲಿ ಸಿಲುಕಿಕೊಂಡ ಕಾಡಾನೆ ಹಿಂಡು ➤ ರಕ್ಷಣಾ ಕಾರ್ಯ ಆರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಎ.13. ನಾಡಿಗೆ ಬಂದ ಕಾಡಾನೆಗಳ ಹಿಂಡು ತೋಟದ ಕೆರೆಯಲ್ಲಿ ಸಿಲುಕಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ.

ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟದ ಮಧ್ಯದಲ್ಲಿದ್ದ ಕೆರೆಗೆ ಎರಡು ದೊಡ್ಡ ಆನೆಗಳು ಮತ್ತು ಎರಡು ಮರಿ ಆನೆಗಳು ಇಳಿದಿದ್ದು, ಮೇಲೇರಲಾರದೆ ಸಿಕ್ಕಿಕೊಂಡಿದೆ. ಕೆರೆಯಲ್ಲಿ ನೀರು ತುಂಬಿರುವ ಕಾರಣ ಆನೆಗಳಿಗೆ ಮೇಲೆ ಬರಲಾಗದೆ ಚಡಪಡಿಸುತ್ತಿದೆ. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.‌

Scroll to Top