ಪುತ್ತೂರು: ವಿವಾಹಿತ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.12. ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಂಪಾಡಿ ಗುಮ್ಮಟಗದ್ದೆ ಎಂಬಲ್ಲಿ ವರದಿಯಾಗಿದೆ.


ಗುಮ್ಮಟಗದ್ದೆಯ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಪುಣ್ಯಶ್ರೀ(32)ಮೃತ ಯುವತಿ. ಪುಣ್ಯಶ್ರೀಯನ್ನು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಉದ್ದದಪಳಿಕೆ ನಿವಾಸಿ ಪುರುಶೋತ್ತಮ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು.


ಪುಣ್ಯಶ್ರೀ ಕಳೆದ ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಪತಿಯ ಮನೆಯಿಂದ ತನ್ನ ತವರು ಮನೆಯಾದ ಗುಮ್ಮಟಗದ್ದೆಗೆ ಆಗಮಿಸಿದ್ದರು ಎನ್ನಲಾಗಿದೆ. ಎ.10ರಂದು ತನ್ನ ಪತಿಗೆ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಲ್ಲದೆ ಅದೇ ದಿನ ತನ್ನ ಚಿಕ್ಕಮ್ಮನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು ಎನ್ನಲಾಗಿದೆ.

Also Read  ಪೇರಡ್ಕ➤ರಸ್ತೆ ದುರಸ್ಥಿ ಕಾರ್ಯ ಪ್ರಾರಂಭ

 

error: Content is protected !!
Scroll to Top