ನೀವು‌‌ ಊಟದ ನಂತರ ಇಂತಹ ತಪ್ಪನ್ನು ಮಾಡಲೇಬೇಡಿ ►ಮಾಡಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.11. ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟದ ನಂತರ ಕೆಲವರಿಗೆ ಏನಾದರೂ ತಿನ್ನುವ ಚಟಗಳಿರುತ್ತವೆ. ಅವುಗಳಲ್ಲಿ ಕೆಲವು ತಪ್ಪು ಅಭ್ಯಾಸಗಳು ಅಪಾಯ ಸೃಷ್ಟಿಸುವುದರೊಂದಿಗೆ ನಿಮ್ಮ ದೇಹ‌ದ ಆರೋಗ್ಯವನ್ನು ಕೆಡಿಸಬಹುದಲ್ಲದೆ ವಿವಿಧ ರೋಗಗಳನ್ನ ಆಹ್ವಾನಿಸಬಹುದು. ಅಂತಹ ಅಭ್ಯಾಸಗಳು ಯಾವುವು ಎಂದು ನೋಡೋಣ ಬನ್ನಿ

  • ಊಟ ಮಾಡಿದ ತಕ್ಷಣ ಈಜಾಡುವುದು ಅಪಾಯ. ಈ ವೇಳೆ ರಕ್ತ ಪ್ರಸಾರದ ವೇಗ ಅಧಿಕವಾಗಿ ಶರೀರದ ಮಾಂಸ ಖಂಡಗಳು ಸ್ಥಗಿತಗೊಳ್ಳುತ್ತದೆ. ವ್ಯಾಯಾಮ, ಜಿಮ್, ಮಾಡಬಾರದು.
  • ಹೆಚ್ಚಾಗಿ ಊಟ ಮಾಡಿದ್ದೇವೆ ಎಂದು ಬೆಲ್ಟನ್ನು ಲೂಸ್ ಮಾಡಿಕೊಳ್ಳಬೇಡಿ.
    ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.
  • ಊಟ ಆದ ನಂತರ ಧೂಮಪಾನ ಮಾಡಬೇಡಿ. ಯಾಕೆಂದರೆ ಇದು ಪಿತ್ತಕೋಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • ಊಟ ಮಾಡಿದ ತಕ್ಷಣ ಹಣ್ಣನ್ನು ತಿಂದರೆ ಆಹಾರ ಬೇಗ ಜೀರ್ಣವಾಗಲ್ಲ. ಬದಲು ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳುತ್ತದೆ. ಇದು ಅಜೀರ್ಣಕ್ಕೆ ಕಾರಣವಾಗುತ್ತದೆ. ಹೀಗೆ ಆದರೆ ಫುಡ್ ಪಾಯಿಜನ್ ಆಗಬಹುದು.
  • ಊಟಕ್ಕಿಂತ ಒಂದು ಗಂಟೆಯ ಮುಂಚಿತ ಅಥವಾ ಗಂಟೆಯ ನಂತರ ಹಣ್ಣನ್ನ ತಿನ್ನಿ.
  • ಬೆಳಿಗ್ಗೆ, ಸಂಜೆ ಊಟ ಮಾಡಿದ ತಕ್ಷಣ ಸ್ನಾನ ಮಾಡಬೇಡಿ. ಯಾಕೆಂದರೆ ರಕ್ತ ಕಾಲುಗಳಿಗೆ, ಕೈಗಳು ಸೇರಿ ಒಟ್ಟು ದೇಹಕ್ಕೆಲ್ಲ ಹರಿಯುತ್ತದೆ. ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ ಜೀರ್ಣ ಪ್ರಕ್ರಿಯೆಯೂ ನಿಧಾನವಾಗುತ್ತದೆ. ಇದರಿಂದ ಜೀರ್ಣ ಸಾಮರ್ಥ್ಯ ಕಡಿಮೆಯಾಗುತ್ತದೆ.
  • ಊಟ ಮಾಡಿದ ತಕ್ಷಣ ಟೀ ಕುಡಿಯಬಾರದು. ಯಾಕೆಂದರೆ ಹೀಗೆ ಮಾಡಿದ್ದಲ್ಲಿ ಅಧಿಕ ಪ್ರಮಾಣದಲ್ಲಿ ಆಸಿಡ್ ಬಿಡುಗಡೆಯಾಗುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದೆ.
  • ಊಟ ಮಾಡಿದ ತಕ್ಷಣ ನಿದ್ದೆ ಮಾಡಬೇಡಿ‌. ಆಗ ಆಹಾರವು ಸರಿಯಾಗಿ ಜೀರ್ಣವಾಗದೆ ಗ್ಯಾಸ್ಟ್ರಿಕ್, ಇನ್ ಫೆಕ್ಷನ್ ಬರಬಹುದು.
  • ಊಟ ಮಾಡಿದ ನಂತರ ನಿದ್ದೆ ಬಂದರೆ 10 ನಿಮಿಷ ಮಲಗಿ ಎದ್ದೇಳಿ
Also Read  ►► ವಿಶೇಷ ಲೇಖನ: ಮಾರ್ಚ್ 06 - ದಂತ ವೈದ್ಯರ ದಿನ ✍? ಡಾ| ಮುರಲೀ ಮೋಹನ್ ಚೂಂತಾರು

ಲೋಕ ಅದರ

error: Content is protected !!
Scroll to Top