ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ರೆಮ್ಡಿಸಿವರ್, ಫಾವಿಪಿರಾವಿರ್ ಔಷಧ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ – News Kadaba

ರೆಮ್ಡಿಸಿವರ್, ಫಾವಿಪಿರಾವಿರ್ ಔಷಧ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com. ನವದೆಹಲಿ, ಏ.11. ಕೊರೊನಾ ಸೋಂಕಿತರ ಚಿಕಿತ್ಸೆಗೆ ರೆಮ್​ಡಿಸಿವರ್​ ಮತ್ತು ಫಾವಿಪಿರಾವಿರ್ ಔಷಧಗಳನ್ನು ಸರ್ಕಾರದ ಅನುಮೋದನೆ ಇಲ್ಲದೇ ಬಳಸಲಾಗಿದೆ.  ಇವು ಸೋಂಕಿನ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಮಾಡಿದೆ. ಇಂತಹ ಅರ್ಜಿಗಳು ವಿಚಾರಣೆ ಮಾಡಲು ಯೋಗ್ಯವಲ್ಲ ಎಂದು ಇದೇ ವೇಳೆ ಹೇಳಿದೆ. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಪೀಠದಲ್ಲಿದ್ದರು.

ವಕೀಲ ಎಂ.ಎಲ್.ಶರ್ಮಾ ಎಂಬುವವರು ಕೊರೊನಾ ಸೋಂಕಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತಿರುವ ರೆಮ್​ಡಿಸಿವರ್​ ಮತ್ತು ಫಾವಿಪಿರಾವಿರ್ ಔಷಧಗಳ ಗುಣಮಟ್ಟ ಮತ್ತು ಪರಿಣಾಮವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೊರೊನಾಗೆ ನೀಡಲಾಗುವ ಔಷಧಿಗಳ ಪಟ್ಟಿಯನ್ನು ಉಲ್ಲೇಖಿಸಿದ್ದ ಶರ್ಮಾ ಅವರು, ಈ ಪಟ್ಟಿಯಲ್ಲಿ ಎಲ್ಲಿಯೂ ಈ ಔಷಧಿಗಳ ಬಗ್ಗೆ ಪ್ರಸ್ತಾಪವಿಲ್ಲ. ಕೊರೊನಾ ವೈರಸ್‌ಗೆ ಅಧಿಕೃತ ಔಷಧಿಗಳಾಗಿ ಇವುಗಳನ್ನು ಗೊತ್ತುಪಡಿಸಲಾಗಿಲ್ಲ ಎಂದು ವಾದಿಸಿದ್ದರು.

ಡಬ್ಲ್ಯೂಎಚ್​ಒ ವರದಿಯು ರೆಮ್‌ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್/ರಿಟೋನವಿರ್ ಮತ್ತು ಇಂಟರ್‌ಫೆರಾನ್ ಕೋವಿಡ್ ಚಿಕಿತ್ಸೆಯಲ್ಲಿ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವ ಔಷಧಿಗಳು ಎಂದು ಸೂಚಿಸಿದೆ. ದೇಶದಲ್ಲಿ ಸೋಂಕು ತಾರಕಕ್ಕೇರಿದ್ದ ವೇಳೆ ಇದೇ ಔಷಧಗಳನ್ನು ಬಳಕೆಗೆ ನೀಡಲಾಗಿದೆ. 10 ಡ್ರಗ್ಸ್​ ಕಂಪನಿಗಳು ಹೇರಳವಾಗಿ ಮಾರಾಟ ಮಾಡಿವೆ. ಅವುಗಳ ವಿರುದ್ಧ ಕ್ರಮ ಕೈಗೊಂಡು, ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಕೋರಿದ್ದರು.

ಕೇಂದ್ರದ ಉತ್ತರ ಕೇಳಿದ್ದ ಸುಪ್ರೀಂ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ 2020 ರಲ್ಲಿ ಕೋವಿಡ್ -19 ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಮತ್ತು ಫಾವಿಪಿರಾವಿರ್ ಅನ್ನು ಚಿಕಿತ್ಸಾ ಔಷಧಿಗಳಾಗಿ ಬಳಸಲು ಅನುಮೋದನೆ ನೀಡಲಾಗಿತ್ತೇ ಎಂಬುದರ ಬಗ್ಗೆ ವರದಿ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಅದರಂತೆ, ಕೇಂದ್ರ ಸರ್ಕಾರ, ಕೊರೊನಾ ಚಿಕಿತ್ಸೆಗಾಗಿ ಡ್ರಗ್ಸ್​ ಕಂಪನಿಗಳು ತಯಾರಿಸಿದ ಔಷಧಿಗಳಿಗೆ ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಬಳಕೆಗೆ ಅನುಮತಿ ನೀಡಿದೆ ಎಂದು ವರದಿ ನೀಡಿತ್ತು. ಇದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್​, ವಕೀಲ ಶರ್ಮಾ ಅವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.

ದೇಶದಲ್ಲಿ ಕೊರೊನಾ ಕೇಸ್​: ದೇಶದಲ್ಲಿ ಹೊಸ ಕೋವಿಡ್ ಕೇಸ್​ಗಳು ಹೆಚ್ಚಾಗುತ್ತಿವೆ. ನಿನ್ನೆಯಿಂದ 24 ಗಂಟೆಗಳ ಅವಧಿಯಲ್ಲಿ 5880 ಹೊಸ ಕೇಸ್​ಗಳು ಪತ್ತೆಯಾಗಿವೆ. ಇದೇ ವೇಳೆ 3481 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ದಿನದ ಪಾಸಿಟಿವಿಟಿ ದರ ಶೇ.6.91 ಏರಿಕೆ ಕಂಡಿದೆ. ಭಾನುವಾರ ಒಂದೇ ದಿನ 85,076 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ದಿನೇ ದಿನೆ ಕೋವಿಡ್​ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇರಳ, ಪುದುಚೇರಿ, ಹರಿಯಾಣದಲ್ಲಿ ಮಾಸ್ಕ್​ ಕಡ್ಡಾಯ ಮಾಡಿ ಆಯಾ ರಾಜ್ಯ ಸರ್ಕಾರಗಳು ಆದೇಶ ಮಾಡಿವೆ.

Scroll to Top