ಚುನಾವಣೆ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟಿಕೊಂಡ ರೈತರು.!   ➤ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ!

(ನ್ಯೂಸ್ ಕಡಬ)Newskadaba.com ಬೆಳಗಾವಿ,ಏ.11 ಚುನಾವಣೆಯಾಗಲಿ ಅಥವಾ ಕ್ರೀಡೆಯಾಗಲಿ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟುವುದು ಸಾಮಾನ್ಯ. ಆದರೆ ಈಗ ರೈತರಿಬ್ಬರು ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ವಿಚಾರವಾಗಿಯೂ ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ ಇಟ್ಟು ಸುದ್ದಿಯಾಗಿದ್ದಾರೆ.

ಹೌದು, ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ ನಡೆದಿದ್ದು, ಈ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಮಾಜಿ ಶಾಸಕರುಗಳಾದ ಡಾ.ವಿಶ್ವನಾಥ ಪಾಟೀಲ ಹಾಗೂ ಜಗದೀಶ ಮೆಟಗುಡ್ಡ ಪೈಪೋಟಿ ನಡೆಸಿದ್ದು ಟಿಕೆಟ್ ಯಾರಿಗೆ ಎಂಬುದು ಇನ್ನೂ ಘೋಷಣೆಯಾಗಿಲ್ಲ.

ಇದರ ಮಧ್ಯೆ ಹಾರೋಗೊಪ್ಪ ಗ್ರಾಮದ ರೈತರೊಬ್ಬರು ಬೈಲಹೊಂಗಲ ಕ್ಷೇತ್ರದ ಟಿಕೆಟ್ ಡಾ. ವಿಶ್ವನಾಥ್ ಪಾಟೀಲ ಅವರಿಗೇ ಸಿಗುತ್ತದೆ ಎಂದು ತಮ್ಮ ಒಂದು ಎಕರೆ ಹೊಲವನ್ನು ಜಿದ್ದಿಗೆ ಇಟ್ಟಿದ್ದರೆ ಇದೇ ಗ್ರಾಮದ ಮತ್ತೊಬ್ಬ ರೈತ ಕೂಡ ಜಗದೀಶ ಮೆಟಗುಡ್ಡ ಪರ ಒಂದು ಎಕರೆ ಹೊಲ ಜಿದ್ದಿಗೆ ಇಟ್ಟಿದ್ದಾರೆ.

 

 

 

Scroll to Top