ಉಡುಪಿ: ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿ.!

(ನ್ಯೂಸ್ ಕಡಬ)newskadaba.com ಉಡುಪಿ, ಏ.11. ಶಂಕರಪುರದ ರೈತ ಜೋಸೆಫ್ ಲೋಬೊ ಅವರ ಮನೆಯಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.

ಈ ಘಟನೆಯನ್ನು ಕುಟುಂಬಸ್ಥರು ವಿಡಿಯೋದಲ್ಲಿ ಸೆರೆ ಹಿಡಿದಿದ್ದು, ಬೆಂಕಿಯಿಂದಾಗಿ ಸ್ಕೂಟರ್‌ನ ಸಮೀಪದಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ. ಇನ್ನು ಬಿಸಿಲಿನ ಬೇಗೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top