ಕಾಸರಗೋಡು: ಆಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ.! ➤ ಬಂಟ್ವಾಳ ನಿವಾಸಿಗಳಿಬ್ಬರು ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.11. ಕರ್ನಾಟಕ ದಿಂದ ಉಪ್ಪಳಕ್ಕೆ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಡಿಸಿಕೊಂಡಿದ್ದು, ಬಂಟ್ವಾಳ ನಿವಾಸಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಟ್ವಾಳ ಬಿ.ಸಿ ರೋಡ್ ನ ಮುಹಮ್ಮದ್ ಇಮ್ತಿಯಾಜ್(38) ಮತ್ತು ಮುಹಮ್ಮದ್ ಜುನೈದ್(29) ಬಂಧಿತರು ಎಂದು ಗುರುತಿಸಲಾಗಿದೆ. ಇವರಿಂದ ಎರಡೂ ವರೆ ಕಿಲೋ ಗಾಂಜಾ ವನ್ನು ವಶ ಪಡಿಸಿಕೊಂಡಿದ್ದು, ಮಂಜೇಶ್ವರ ಕೆದಂಬಾಡಿ ಕಡೆಯಿಂದ ಕುಂಜತ್ತೂರಿಗೆ ಒಳದಾರಿಯಾಗಿ ಬರುತ್ತಿದ್ದ ಆಟೋ ರಿಕ್ಷಾ ವನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಉಪ್ಪಳ ಕಡೆಗೆ ಸಾಗಾಟ ಮಾಡುತ್ತಿದ್ದುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

Also Read  ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು

 

error: Content is protected !!
Scroll to Top