ಅಡ್ಡಹೊಳೆ: ಟ್ಯಾಂಕರ್ ಪಲ್ಟಿಯಾಗಿ ಗ್ಯಾಸ್ ಸೋರಿಕೆಯ ಹಿನ್ನೆಲೆ ►ಗುರುವಾರ ಬೆಳಿಗ್ಗೆಯವರೆಗೆ ವಾಹನ ಸಂಚಾರ ತಡೆ ಹಿಡಿಯಲು ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.10. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನ ಕೊಟ್ಟಿಕ್ಕಲ್ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅನ್ವಯವಾಗುವಂತೆ ಜ.11 ಗುರುವಾರ ಬೆಳಿಗ್ಗೆ 7.30 ಗಂಟೆಯವರೆಗೆ ಶಿರಾಡಿ ಘಾಟಿಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿದೆ.

ಮಂಗಳೂರು ಬೆಂಗಳೂರು ತೆರಳುವ ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಅಥವಾ ಮಾಣಿ-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Also Read  Лучшие Онлайн Казино Рейтинг Топ Казино Для Игр

error: Content is protected !!
Scroll to Top