ಏ.8ರ ನಂತರ BJP ಪಟ್ಟಿ ಬಿಡುಗಡೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಹುಬ್ಬಳ್ಳಿ, ಏ. 07. ಬಿಜೆಪಿ ಕೋರ್‌ ಕಮೀಟಿ ಸಭೆ ಬುಧವಾರವಷ್ಟೇ ಮುಗಿದಿದ್ದು, ಏ.8ರಂದು ಮತ್ತೂಮ್ಮೆ ಸಭೆ ನಡೆಸಿ ನಂತರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ವಿಷಯದಲ್ಲಿ ನಾವು ಶ್ರದ್ಧೆ-ನಿಷ್ಠೆಯಿಂದ ನೊಂದ ದೀನದಲಿತ, ಹಿಂದುಳಿದ ವರ್ಗದ ಸಮುದಾಯಕ್ಕೆ ಶಾಶ್ವತವಾಗಿ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ನಾವು ಮಾಡಲಾಗದ್ದನ್ನು ಇವರು ಮಾಡಿದರಲ್ಲ ಎಂಬ ಅಪರಾಧ ಮನೋಭಾವ ಕಾಂಗ್ರೆಸ್‌ನವರನ್ನು ಕಾಡುತ್ತಿದೆ. ಮೀಸಲಾತಿ ವಿಚಾರವಾಗಿ ನಾವು ಕೈಗೊಂಡ ನಿರ್ಧಾರಗಳು ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದೆ. ನಾವು ರಾಜಕೀಯ ಇಚ್ಛಾಶಕ್ತಿ ಮೆರೆದರೆ, ಕಾಂಗ್ರೆಸ್‌ನದ್ದು ಡೋಂಗಿತನದ್ದಾಗಿದೆ ಎಂದು ಕುಟುಕಿದರು.

Also Read  'ರದ್ದಾದ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಮತ್ತೆ ಜಾರಿಗೆ ತರಬೇಕು'- ಕಂಗನಾ ರಣಾವತ್

 

error: Content is protected !!
Scroll to Top