ಹೊಸ ವಿದೇಶ ವ್ಯಾಪಾರ ನೀತಿಯ ಅನಾವರಣ     ➤ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.04 ಸರಕು ಮತ್ತು ಸೇವಾ ವಲಯಗಳಿಂದ ಸಮಾನ ಕೊಡುಗೆಗಳೊಂದಿಗೆ 2030 ರ ವೇಳೆಗೆ ಭಾರತದ ಒಟ್ಟಾರೆ ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್​ಗೆ (164 ಲಕ್ಷ ಕೋಟಿ ರೂಪಾಯಿಗೆ) ಹೆಚ್ಚಿಸುವ ಗುರಿಯನ್ನು ಹೊಸ ವಿದೇಶ ವ್ಯಾಪಾರ ನೀತಿಯು ಹೊಂದಿದೆ. ಜುಲೈ 2022 ರಲ್ಲಿ ಆರ್​ಬಿಐ ಪರಿಚಯಿಸಿದ ಹೊಸ ಪಾವತಿ ವ್ಯವಸ್ಥೆಯ ಸಹಾಯದಿಂದ ಗಡಿಯಾಚೆಗಿನ ವ್ಯಾಪಾರದಲ್ಲಿ ಭಾರತೀಯ ಕರೆನ್ಸಿಯ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಉದ್ದೇಶಿಸಿದೆ.

ಭಾರತವು ವ್ಯಾಪಾರ ಮಿಗತೆ (ಆಮದಿಗಿಂತ ರಫ್ತು ಹೆಚ್ಚಾಗಿರುವುದು) ಹೊಂದಿರುವ ದೇಶಗಳ ಸಂದರ್ಭದಲ್ಲಿ ಇದು ವಿಶೇಷವಾಗಿ ಅನುಕೂಲ ಆಗಲಿದೆ. ವಿದೇಶ ವ್ಯಾಪಾರ ನೀತಿಯ ಅವಧಿ ಈ ಹಿಂದೆ ಐದು ವರ್ಷಗಳ ಅವಧಿಯದ್ದಾಗಿತ್ತು. ಆದರೆ, ಈ ಬಾರಿ ಈ ಸಂಪ್ರದಾಯವನ್ನು ಸರ್ಕಾರ ಮುರಿದಿದೆ. ಹೊಸ ನೀತಿಗೆ ಯಾವುದೇ ಕಾಲಮಿತಿ ನಿಗದಿಪಡಿಸಲಾಗಿಲ್ಲ. ಹೊಸ ನೀತಿಯು ಬದಲಾಗುತ್ತಿರುವ ಸಂದರ್ಭಗಳಿಗೆ ಸ್ಪಂದಿಸುವ ಉದ್ದೇಶ ಹೊಂದಿದ್ದು, ಅಗತ್ಯವಿದ್ದಾಗ ಅದನ್ನು ಮಾರ್ಪಡಿಸಬಹುದಾಗಿದೆ.

Also Read  ➤➤ Big Breaking News ಅಯೋಧ್ಯೆ ತೀರ್ಪಿಗೆ ಮುಹೂರ್ತ ಫಿಕ್ಸ್ ➤ ನಾಳೆ ಬೆಳಿಗ್ಗೆ 10.30 ಕ್ಕೆ ಅಂತಿಮ ತೀರ್ಪು

 

error: Content is protected !!
Scroll to Top