ಹಿಜಾಬ್‌ ತೆಗೆಯುವಂತೆ ಒತ್ತಾಯ ➤ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com. ವೆಲ್ಲೂರು, ಮಾ.31. ಐತಿಹಾಸಿಕ ವೆಲ್ಲೂರು ಕೋಟೆಗೆ ಭೇಟಿ ನೀಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಒತ್ತಾಯಪೂರ್ವಕವಾಗಿ ಹಿಜಾಬ್‌ ತೆಗೆಯುವಂತೆ ಹೇಳಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ಮಹಿಳೆಗೆ ತೊಂದರೆ ನೀಡಿದ ಗುಂಪಿನಲ್ಲಿ ಒಟ್ಟು ಏಳು ಮಂದಿ ಇದ್ದರು. ಇದರಲ್ಲಿ 17 ವರ್ಷದ ಬಾಲಕನನ್ನು ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಉಳಿದ ಆರು ಮಂದಿಯನ್ನು ಬಂಧಿಸಲಾಗಿದೆ. ಇಮ್ರಾನ್‌ ಬಾಷಾ (22), ಅಶ್ರಫ್‌ ಬಾಷಾ (20), ಮೊಹಮ್ಮದ್‌ ಫೈಜಲ್‌ (23), ಸಂತೋಷ್‌ (23), ಇಬ್ರಾಹಿಂ ಬಾಷಾ (24) ಹಾಗೂ ಪ್ರಶಾಂತ್ (20) ಬಂಧಿತರು’ ಎಂದು ಪೊಲೀಸರು  ಹೇಳಿದರು.

‘ಈ ಯುವಕರು ಆಟೊರಿಕ್ಷಾ ಚಾಲಕರು ಎಂದು ಶಂಕಿಸಲಾಗಿದೆ. ಕೋಟೆಗೆ ಭೇಟಿ ನೀಡಿದ್ದ ಇನ್ನೂ ಮೂವರು ಮಹಿಳೆಯರಿಗೆ ಹಿಜಾಬ್‌ ತೆಗೆಯುವಂತೆ ಒತ್ತಾಯಪಡಿಸಿದ್ದರು. ಈ ಯುವಕರು ಯಾಕಾಗಿ ಈ ರೀತಿ ವರ್ತನೆ ಮಾಡಿದ್ದಾರೆ ಎನ್ನುವ ಕುರಿತು ಮಾಹಿತಿ ದೊರೆತಿಲ್ಲ.  ಮಹಿಳೆಯ ಜೊತೆಗಿದ್ದ ಆಕೆಯ ಸ್ನೇಹಿತನನ್ನು ಪ್ರಶ್ನಿಸಿದ್ದ ಈ ಯುವಕರು, ಹಿಜಾಬ್‌ ಧರಿಸಿದ ಮಹಿಳೆಯೊಂದಿಗೆ ಹೊರಗಡೆ ತಿರುಗಾಡಲು ಬರುವುದು ಸರಿಯೇ?’ ಎಂದು ಕೇಳಿದ್ದಾರೆ.  ಈ ಘಟನೆಯ ಬಳಿಕ ವೆಲ್ಲೂರು ಕೋಟಿಗೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಕೋಟಿಯಲ್ಲಿ ಪೊಲೀಸ್‌ ಬೂತ್‌ವೊಂದನ್ನೂ ತೆರೆಯಲಾಗಿದೆ.

error: Content is protected !!
Scroll to Top