ಈ ದುರಂತದಲ್ಲಿ 12 ಜನ ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ. 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಹಲವು ಪ್ರಯಾಣಿಕರು ನೀರಿಗೆ ಹಾರಿದ್ದಾರೆ ಎಂದು ವಿಪತ್ತು ಅಧಿಕಾರಿ ನಿಕ್ಸನ್ ಅಲೋಂಜೊ ಹೇಳಿದರು.
ಅಪಘಾತದ ಬಳಿಕ ಮಾಹಿತಿ ಪಡೆದ ಫಿಲಿಪ್ಪೀನ್ಸ್ ಕೋಸ್ಟ್ ಗಾರ್ಡ್ ಮೀನುಗಾರರು ಸೇರಿದಂತೆ 230 ಮಂದಿಯನ್ನು ರಕ್ಷಿಸಿದ್ದಾರೆ. ಅವರಲ್ಲಿ 195 ಪ್ರಯಾಣಿಕರು ಮತ್ತು 35 ಸಿಬ್ಬಂದಿ ಇದ್ದಾರೆ. ಇನ್ನೂ ಏಳು ಮಂದಿ ಪತ್ತೆಯಾಗಿಲ್ಲ ಎಂದು ನಿಕ್ಸನ್ ಅಲೊಂಜೊ ಹೇಳಿದ್ದಾರೆ.















