ಕರಿಬೇವಿನ ಸೇವನೆಯಿಂದ ಉಂಟಾಗುವ ಲಾಭಗಳು ತಿಳಿದಿವೆಯಾ…?

(ನ್ಯೂಸ್ ಕಡಬ) newskadaba.com ಆರೋಗ್ಯ, ಜ.09. ಕರಿಬೇವಿನ ಸೇವನೆಯಿಂದಾಗುವ 10 ಆಶ್ಚರ್ಯಕರ ಲಾಭಗಳು ಯಾವುದೆಂದು ತಿಳಿದಿವೆಯಾ…? ಕರಿಬೇವಿನ ಎಲೆಗಳಲ್ಲಿರುವ ಕಾರ್ಬಾಜೋಲ್ ಅಲ್ಕಲಾಯಿಡ್ಸ್ ಅಂಶಗಳು ಅತಿಸಾರವನ್ನು ತಡೆಗಟ್ಟಲು ಸಹಕಾರಿಯಾಗಿವೆ.

ಕರಿಬೇವಿನಲ್ಲಿರುವ ಫೀನಾಲ್ ಹೆಸರಿನ ರಾಸಾಯನಿಕ ಘಟಕ ಲುಕೇಮಿಯಾ, ಪ್ರೊಸ್ಟ್ರೇಟ್ ಕ್ಯಾನ್ಸರ್ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಕರಿಬೇವಿನ ಸೇವನೆ ರಕ್ತದಲ್ಲಿನ ಸಕ್ಕರೆ ಅಂಶದ ಸಮತೋಲನವನ್ನು ಕಾಪಾಡಿ ಡಯಾಬಿಟೀಸ್ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಎ, ಬಿ, ಸಿ, ಇ ವಿಟಾಮಿನ್ ಹಾಗೂ ಆ್ಯಂಟಿ ಆ್ಯಕ್ಷಿಡೆಂಟ್ ಗಳನ್ನು ಹೊಂದಿರುವ ಕರಿಬೇವು ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಕ್ಷೀಣಿಸುವಿಕೆಯಿಂದ ನಮ್ಮನ್ನು ರಕ್ಷಿಸುತ್ತವೆ. ನಿಯಮಿತ ಕರಿಬೇವಿನ ಸೊಪ್ಪಿನ ಸೇವನೆ ನಮ್ಮ ದೇಹವನ್ನು ಜಠರ ಸಂಬಂಧಿ ಸಮಸ್ಯೆಗಳಿಂದ ದೂರವಿರಿಸುತ್ತದೆ.ಕರಿಬೇವು ನಮ್ಮ ದೇಹದಲ್ಲಿರುವ (low-density lipoproteins -LDL) ಕೊಬ್ಬನ್ನು ಕರಗಿಸುವಲ್ಲಿ ಸಹಕಾರಿಯಾಗಿದೆ. ದೇಹದ ಹೆಚ್ಚಿನ ತೂಕ ಕರಗಿಸಲು ಬಯಸುವವರಿಗೆ ಕರಿಬೇವು ಉಪಕಾರಿಯಾಗಿದೆ.

Also Read  ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು..!

ಒಣಗಿದ ಕರಿಬೇವಿನ ಎಲೆಗಳನ್ನು ಕುಟ್ಟಿ ಪುಡಿ ಮಾಡಿ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ಕೂದಲಿನ ಬೇರುಗಳನ್ನು ಧೃಢವಾಗಿಸಿ, ಉತ್ತಮ ಬೆಳವಣಿಗೆಗೆ ಕಾರಣವಾಗುತ್ತವೆ. ವಿಟಮಿನ್ ಎ ಹೊಂದಿರುವುದರಿಂದ ಕರಿಬೇವು ನಮ್ಮ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ‘ವಿಟಮಿನ್ ಎ’ ನಲ್ಲಿರುವ ಕ್ಯಾರಟನಾಯಿಡ್ಸ್ ಅಂಶ ಕಣ್ಣಿನ ಮೇಲ್ಪದರವಾದ ಕಾರ್ನಿಯಾವನ್ನು ರಕ್ಷಿಸುತ್ತವೆ. ಕರಿಬೇವು ನಮ್ಮ ಚರ್ಮದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಎಲೆಗಳನ್ನು ಅರೆದು ಪೇಸ್ಟ್ ಮಾಡಿ ಹಚ್ಚುವುದರಿಂದ ಸುಟ್ಟಗಾಯ, ಚರ್ಮದ ತುರಿಕೆಗಳನ್ನು ಕಡಿಮೆ ಮಾಡುವಲ್ಲಿ ನೆರವಾಗುತ್ತದೆ.ಕರಿಬೇವಿನಲ್ಲಿರುವ ಟ್ಯಾನಿನ್ ಹಾಗೂ ಕಾರ್ಬಾಜೋಲ್ ಅಲ್ಕಲಾಯಿಡ್ ಗಳು ಪಿತ್ತಕೋಶಕ್ಕೆ ರಕ್ಷಣೆಯನ್ನು ಒದಗಿಸಿ ಹೆಪಟೈಟಿಸ್ ನಂತಹ ರೋಗಗಳಿಂದ ದೂರವಿರಿಸುತ್ತದೆ.

Also Read  ಜೀವನದಲ್ಲಿ ಪ್ರೀತಿ ಪ್ರೇಮ, ವ್ಯಾಪಾರ,ಮದುವೆ, ಅಡೆತಡೆಗಳಿಂದ ಮುಕ್ತಿ ಪಡೆಯಲು ಇದನ್ನು ಒಮ್ಮೆ ಪಾಲಿಸಿರಿ ಸಾಕು

error: Content is protected !!
Scroll to Top