ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ        

(ನ್ಯೂಸ್ ಕಡಬ)newskadaba.com ಮುಂಬೈ, ಮಾ.30. ಮಹಾರಾಷ್ಟ್ರದ ಔರಂಗಾಬಾದ್’ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ವೇಳೆ ಒಂದು ಗುಂಪು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದಲ್ಲದೆ ಹಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಈಗ ಚತ್ರಪತಿ ಸಂಭಾಜಿ ನಗರ ಆಗಿರುವ ಔರಂಗಾಬಾದಿನಲ್ಲಿ ಎರಡು ಗುಂಪುಗಳ ನಡುವಣ ವಾಗ್ವಾದವು ಗಲಭೆಗೆ ತಿರುಗಿದೆ ಎಂದು ತಿಳಿದುಬಂದಿದೆ.

ಒಂದು ಕಡೆ ರಾಮ ನವಮಿ, ಮತ್ತಿನ್ನೊಂದು ಕಡೆ ರಮಝಾನ್ ಉಪವಾಸವಿರುವುದರಿಂದ ಕೋಮು ಗಲಭೆಗೆ ತಿರುಗಬಾರದು ಎನ್ನುವುದಕ್ಕಾಗಿ ಭಾರೀ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸದ್ಯ ಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  SBI ಗ್ರಾಹಕರಿಗೆ ಉಚಿತವಾಗಿ ಸಿಗುತ್ತೆ ಈ 10 ಸೇವೆ.!

 

 

error: Content is protected !!
Scroll to Top