ಮಂಗಳೂರು: ಬೈಕ್ ನಲ್ಲಿ ತೆರಳುತ್ತಿದ್ದ ಜೋಡಿಯನ್ನು ತಡೆದು ಸುಲಿಗೆ..! ➤ ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30. ಬೈಕ್ ನಲ್ಲಿ ತೆರಳುತ್ತಿದ್ದ ಯುವಕ- ಯುವತಿಯನ್ನು ತಡೆದು ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಸ್ತಿಪಡ್ಪು ನಿವಾಸಿ ಝಾಕೀರ್ ಹುಸೇನ್‌ (27), ಸೋಮೇಶ್ವರ ನಿವಾಸಿ ಉಬೈದುಲ್ಲ(33), ಮೇಲಂಗಡಿ ನಿವಾಸಿ ಖಲೀಲ್(22) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.


ಉಚ್ಚಿಲ ಪರಿಸರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೂವರ ತಂಡ ಅವರನ್ನು ತಡೆದು ಯುವತಿಯ ಕೈಯಲ್ಲಿದ್ದ ಐ-ಫೋನ್, ಬೈಕ್ ದೋಚಿ ಪರಾರಿಯಾಗಿದ್ದರು. ಈ ಕುರಿತು ಬೈಕ್ ಸವಾರ ಅಬ್ದುಲ್ಲ ಎಂಬವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.

Also Read  ಬೆಳ್ತಂಗಡಿ: ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಗೆ ಬೆದರಿಕೆ - ಆರೋಪಿ ಅರೆಸ್ಟ್…!

 

error: Content is protected !!
Scroll to Top