ಬೆಳ್ತಂಗಡಿ: ಹೆಂಡತಿಗೆ ಕತ್ತಿಯಿಂದ ಕಡಿದ ಪಾಪಿ ಗಂಡ..!  ➤ ಪತ್ನಿ ಆಸ್ಪತ್ರೆಗೆ, ಪತಿ ರಕ್ತದೊತ್ತಡದಿಂದ ಮೃತ್ಯು

(ನ್ಯೂಸ್ ಕಡಬ)newskadaba.com ಧರ್ಮಸ್ಥಳ, ಮಾ.29. ಪತಿ ಮತ್ತು ಪತ್ನಿ ನಡುವೆ ಜಗಳ ನಡೆದು, ಪತಿ ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಹತ್ತಿರ ಗಂಗೆತ್ಯಾರ್ ಎಂಬಲ್ಲಿ ಎಂಬಲ್ಲಿ ನಡೆದಿದೆ. ರಾಮಣ್ಣ ಗೌಡ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಚೆನ್ನಕ್ಕ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತ್ನಿಯೊಂದಿಗೆ ಜಗಳವಾಡಿದ ರಾಮಣ್ಣ ಗೌಡ ಚೆನ್ನಕ್ಕನಿಗೆ ಹಲ್ಲೆ ನಡೆಸಿ ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ತತ್ ಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಇವರಿಗೆ ಮೂವರು ಪುತ್ರರು ಓರ್ವ ಪುತ್ರಿ ಇದ್ದಾರೆ . ಘಟನೆಯಿಂದ ಪತ್ನಿ ನೊಂದಿದ್ದು ಪ್ರಕರಣ ಹಿಂಪಡೆದಿದ್ದಾರೆ ಎನ್ನಲಾಗಿದೆ.

Also Read  ಅಡಿಕೆ ಮತ್ತು ತೆಂಗಿನ ಮರ ಹತ್ತುವ ತರಬೇತಿ - ಅರ್ಜಿ ಆಹ್ವಾನ

 

 

error: Content is protected !!
Scroll to Top