ತಂಗಿಗೆ ಬರೊಬ್ಬರಿ 8.31 ಕೋಟಿ ಮೌಲ್ಯದ ವರದಕ್ಷಿಣೆ ನೀಡಿದ ಸಹೋದರರು

(ನ್ಯೂಸ್ ಕಡಬ)newskadaba.com ರಾಜಸ್ಥಾನ, ಮಾ.29. ಒಡಹುಟ್ಟಿದ ತಂಗಿ ಮದುವೆಗೆ 8 ಕೋಟಿ ರೂಪಾಯಿ ಮೌಲ್ಯದ ವರದಕ್ಷಿಣೆ ನೀಡಿ ಸಹೋದರರು ಸುದ್ದಿಯಾಗಿದ್ದಾರೆ. ನಾಗೌರ್ ಜಿಲ್ಲೆಯ ದಿಂಗಸಾಗರ ಗ್ರಾಮದ ಮೆಹರಿಯ ಕುಟುಂಬ ಇದೀಗ ಭಾರತದಾದ್ಯಂತ ಸದ್ದು ಮಾಡುತ್ತಿದೆ.

ನಾಲ್ವರು ಸಹೋದರರು ತಮ್ಮ ತಂಗಿಗೆ ಕಂತೆ ಕಂತೆ ದುಡ್ಡಿನ ನೋಟು ವೇದಿಕೆಗೆ ತಂದು ಎಲ್ಲರ ಮುಂದೆ ಪ್ರದರ್ಶಿಸಿ ವರದಕ್ಷಿಣೆ ನೀಡಿದ್ದಾರೆ. ಮೆಹರಿಯಾ ಕುಟುಂಬದ ಭನ್ವಾರಿ ದೇವಿ ಮದುವೆ ಮಾರ್ಚ್ 26 ರಂದು ನಿಗದಿ ಮಾಡಲಾಗಿತ್ತು.ತಂಗಿಯ ಮದುವೆಗೆ ಸಹೋದರರಾದ ಅರ್ಜುನ್ ರಾಮ್ ಮೆಹರಿಯಾ, ಭಗೀರತ್ ಮೆಹರಿಯಾ, ಉಮೈದ್ ಜೀ ಮೆಹರಿಯಾ ಹಾಗೂ ಪ್ರಹ್ಲಾದ್ ಮೆಹರಿಯಾ ಬರೋಬ್ಬರಿ 8.31 ಕೋಟಿ ರೂಪಾಯಿ ವರದಕ್ಷಿಣೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. 8.31 ಕೋಟಿ ರೂಪಾಯಿ ವರದಕ್ಷಿಣೆಯಲ್ಲಿ 2.21 ಕೋಟಿ ರೂಪಾಯಿ ನಗದು ಹಣವನ್ನು ಮದುವೆ ಮಂಟಪಕ್ಕೆ ಬುಟ್ಟಿಯಲ್ಲಿ ಹೊತ್ತುಕೊಂಡು ತರಲಾಗಿದೆ.

Also Read  ಪಾಕ್ ಪರ ಘೋಷಣೆ ಕೂಗಿದ 'ಅಮೂಲ್ಯ' ➤ ಸ್ಟೇಜ್ ನಿಂದ ಹೊರದಬ್ಬಿ ಪೊಲೀಸರಿಗೆ ಒಪ್ಪಿಸಿದ ಆಯೋಜಕರು

 

 

error: Content is protected !!
Scroll to Top