ದೀಪಕ್ ರಾವ್ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ► ದೀಪಕ್ ಸಹೋದರನಿಗೆ MRPL ನಲ್ಲಿ ಕೆಲಸ ನೀಡುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07, ಇತ್ತೀಚೆಗೆ ದುಷ್ಕರ್ಮಿಗಳ ಇರಿತಕ್ಕೊಳಗಾಗಿ ಮೃತಪಟ್ಟಿದ್ದ ದೀಪಕ್ ರಾವ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ದೀಪಕ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಸುರತ್ಕಲ್ ನ ಕಾಟಿಪಳ್ಳದಲ್ಲಿರುವ ದೀಪಕ್ ಮನೆಗೆ ಭಾನುವಾರ ರಾತ್ರಿ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೀಪಕ್ ರಾವ್ ತಾಯಿಯನ್ನು ಸಂತೈಸಿದರು. ಜೊತೆಗೆ ದೀಪಕ್ ಸಹೋದರನಿಗೆ ಎಂ.ಆರ್.ಪಿ.ಎಲ್.ನಲ್ಲಿ ಕೆಲಸ ನೀಡುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 

error: Content is protected !!
Scroll to Top