ತುಂಬೆ ಗಿಡದ ತುಂಬೆಲ್ಲ ತುಂಬಿದೆ ಔಷಧಿಗುಣ

(ನ್ಯೂಸ್ ಕಡಬ) Newskadaba.com ಮಾ 25, ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಇದರ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದಂತೆ ಪ್ರತಿ ವಯಸ್ಕರಲ್ಲಿ ಜ್ವರ ನೆಗಡಿ ಶುರುವಾಗುತ್ತದೆ.

ಇದಕ್ಕೆ ಔಷಧಿಯೇನೆಂದರೆ ತುಂಬೆ ಗಿಡದ ಎಲೆಯ ರಸದ ಜೊತೆಗೆ ಕಾಳು ಮೆಣಸಿನ ಬೆರೆಸಿ ಕುಡಿಯುವುದರಿಂದ ಜ್ವರ ಅಥವಾ ನೆಗಡಿ ಶಮನಗೊಳ್ಳುತ್ತದೆ. ಮೈ ಕೈ ನೋವಿಗೆ ಪರಿಹಾರ ಒಂದಷ್ಟು ತುಂಬೆ ಗಿಡದ ಕಾಂಡಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿದ ನೀರಿನಿಂದ ನೋವು ಇರುವ ಜಾಗಕ್ಕೆ ಬಟ್ಟೆಯಿಂದ ಒತ್ತಿಕೊಳ್ಳುವುದರಿಂದ ಮೈ ಕೈ ನೋವು ನಿಯಂತ್ರಣಕ್ಕೆ ಬರುತ್ತದೆ.

Also Read  ದ.ಕ ಜಿಲ್ಲೆ: 5ಕ್ಕಿಂತ ಮೇಲ್ಪಟ್ಟ ಕೋವಿಡ್ ಪಾಸಿಟಿವ್ ಬಂದ ಶಾಲೆಗಳನ್ನು ಒಂದು ವಾರ ಸ್ಥಗಿತಗೊಳಿಸಿ ➤ ಜಿಲ್ಲಾಧಿಕಾರಿ ಸೂಚನೆ

 

error: Content is protected !!
Scroll to Top