ಪೋಖ್ರಾನ್‌ನಲ್ಲಿ ಸೇನಾ ಕ್ಷಿಪಣಿ ಮಿಸ್‌ಫೈರ್ ➤ ತನಿಖೆಗೆ ಆದೇಶ

(ನ್ಯೂಸ್ ಕಡಬ) Newskadaba.com ರಾಜಸ್ಥಾನ; ಮಾ,25  ರಾಜಸ್ಥಾನದ ಜೈಸಲ್ಮೇರ್‌ನ ಪೋಖರಾನ್ ಶ್ರೇಣಿಯಲ್ಲಿ ಸೇನಾ ಘಟಕವು ಫೀಲ್ಡ್ ಫೈರಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಕ್ಷಿಪಣಿ ಮಿಸ್‌ಫೈರ್ ಪ್ರಕರಣ ವರದಿಯಾಗಿದೆ.

ಭಾರತೀಯ ಸೇನೆಯ ಅಧಿಕಾರಿಗಳ ಪ್ರಕಾರ, ಕ್ಷಿಪಣಿಯು ಹಾರಾಟದಲ್ಲಿ ಸ್ಫೋಟಿಸಿತು.ಆದರೆ, ಅವಶೇಷಗಳು ಪಕ್ಕದ ಹೊಲಗಳಲ್ಲಿ ಬಿದ್ದವು. ‘ಯಾವುದೇ ಸಿಬ್ಬಂದಿ ಮತ್ತು ಆಸ್ತಿಗೆ ಹಾನಿಯಾಗಿಲ್ಲ. ಸಮಸ್ಯೆಯನ್ನು ತನಿಖೆ ನಡೆಸಲಾಗುತ್ತಿದೆ’ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

 

 

error: Content is protected !!
Scroll to Top