ಐಪಿಎಸ್‌ ಅಧಿಕಾರಿ ರೂಪಾಗೆ ಕೋರ್ಟ್‌ ನೋಟಿಸ್‌

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.25. ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಕ್ರಿಮಿನಲ್‌ ಮಾನನಷ್ಟ ಪ್ರಕರಣ ದಾಖಲಿಸಿಕೊಂಡಿರುವ 8ನೇ ಎಸಿಎಂಎಂ ನ್ಯಾಯಾಲಯವು ಎ.26ಕ್ಕೆ ಹಾಜರಾಗುವಂತೆ ರೂಪಾ ಮೌದ್ಗಿಲ್ ಗೆ ಸಮನ್ಸ್‌ ಜಾರಿಗೊಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿ ವೈಯಕ್ತಿಕ ಫೋಟೋ ಹರಿಬಿಟ್ಟು ಆರೋಪಗಳನ್ನು ಮಾಡಿದ್ದಕ್ಕೆ ರೂಪಾ ಮೌದ್ಗಿಲ್‌ ವಿರುದ್ಧ ರೋಹಿಣಿ ಸಿಂಧೂರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

 

Also Read  ಸಚಿವ ಸ್ಥಾನದಿಂದ ಕಿರಣ್ ರಿಜಿಜುಗೆ ಗೇಟ್ ಪಾಸ್..!➤ಕಾನೂನು ಸಚಿವರಾಗಿ ಅರ್ಜುನ್ ಮೇಘವಾಲ್ ನೇಮಕ *

 

error: Content is protected !!
Scroll to Top